Kannada Duniya

ಕೂದಲಿಗೆ ಮೊಟ್ಟೆಯನ್ನು ಹಚ್ಚುವಾಗ ಈ ವಿಷಯ ತಿಳಿದಿರಲಿ….!

ನಮ್ಮ ಕೂದಲಿನ ಬೆಳವಣಿಗೆಗೆ ಪ್ರೋಟೀನ್ ತುಂಬಾ ಅಗತ್ಯ. ಹಾಗಾಗಿ ಪ್ರೋಟಿನ್ ಕಡಿಮೆಯಾದರೆ ಕೂದಲಿನ ಸಮಸ್ಯೆ ಕಾಡುತ್ತದೆ ಮಾತ್ರವಲ್ಲ ಪ್ರೋಟೀನ್ ಹೆಚ್ಚಾದರೂ ಕೂಡ ಕೂದಲಿನ ಸಮಸ್ಯೆ ಕಾಡುತ್ತದೆ. ಕೂದಲಿಗೆ ಮೊಟ್ಟೆಯನ್ನು ಹಚ್ಚುವುದು ಪ್ರಯೋಜನಕಾರಿ. ಆದರೆ ಮೊಟ್ಟೆ ಹಚ್ಚುವ ಮೊದಲು ಈ ವಿಚಾರಗಳನ್ನು ತಿಳಿದಿರಿ.

-ಕೂದಲಿಗೆ ಮೊಟ್ಟೆಗಳನ್ನು ನೇರವಾಗಿ ಹಚ್ಚಬಾರದು. ಮೊಟ್ಟೆಯ ಬಿಳಿ ಭಾಗಗಳನ್ನು ಮಾತ್ರ ಹಚ್ಚಬೇಕು. ಹಾಗೇ ಮೊಟ್ಟೆಯ ಜೊತೆಗೆ ಮೊಸರು, ಅಲೋವೆರಾ, ಬಾಳೆಹಣ್ಣು, ನೆಲ್ಲಿಕಾಯಿಯನ್ನು ಮಿಕ್ಸ್ ಮಾಡಿ ಹಚ್ಚಬಹುದು.

-ಕೂದಲಿಗೆ ಮೊಟ್ಟೆಯ ಹೇರ್ ಪ್ಯಾಕ್ ಹಚ್ಚಿ 30-40 ನಿಮಿಷಗಳ ಕಾಲ ಇಡಬೇಕು. ಮೊಟ್ಟೆಯ ಹೇರ್ ಪ್ಯಾಕ್ ಹಚ್ಚಿ ಒಣಗಲು ಬಿಡಬೇಡಿ. ಮತ್ತು ಬಿಸಿಲಿನಲ್ಲಿ ಕುಳಿತುಕೊಳ್ಳಬೇಡಿ. ಯಾಕೆಂದರೆ ಸೂರ್ಯನ ಶಾಖವು ಮೊಟ್ಟೆಯನ್ನು ಬೇಯಿಸುತ್ತದೆ. ಬಳಿಕ ಅದನ್ನು ಕೂದಲಿಂದ ತೆಗೆಯುವುದು ಕಷ್ಟ.

ಹಾನಿಗೊಳಗಾದ ಕೂದಲಿಗೆ ಈ ಹೇರ್ ಪ್ಯಾಕ್ ಹಚ್ಚಿ

-ಮೊಟ್ಟೆ ಹೇರ್ ಪ್ಯಾಕ್ ಬಳಸಿದ ಕೂದಲನ್ನು ಸ್ವಚ್ಛಗೊಳಿಸಲು ಸಾಮಾನ್ಯ ನೀರನ್ನು ಬಳಸಿ. ಬಿಸಿ ನೀರು, ಉಗುರು ಬೆಚ್ಚಗಿನ ನೀರನ್ನು ಬಳಸಬೇಡಿ. ಇದರಿಂದ ಕೂದಲು ಕ್ಲೀನ್ ಆಗುವುದಿಲ್ಲ.

ಹಾಗೇ ಹೇರ್ ಪ್ಯಾಕ್ ತೆಗೆದ ಬಳಿಕ ಕೂದಲನ್ನು ಕನಿಷ್ಠ 3 ಬಾರಿ ಶಾಂಪೂ ಬಳಸಿ ತೊಳೆಯಿರಿ. ಅಥವಾ ನಿಂಬೆ ರಸ ಮಿಕ್ಸ್ ಮಾಡಿದ ನೀರಿನಿಂದ ತೊಳೆದರೆ ವಾಸನೆ ಹೋಗುತ್ತದೆ. ಮೊಟ್ಟೆ ಹೇರ್ ಪ್ಯಾಕ್ ಹಚ್ಚಿ ತೊಳೆದ ಬಳಿಕ ಕೂದಲಿಗೆ ಡ್ರೈಯರ್ ಅನ್ನು ಬಳಸಬೇಡಿ.

Points to take care of while using egg on hair and tips to get rid of egg smell while washing hair


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...