Kannada Duniya

ಹಾನಿಗೊಳಗಾದ ಕೂದಲಿಗೆ ಈ ಹೇರ್ ಪ್ಯಾಕ್ ಹಚ್ಚಿ….!

ಕೂದಲನ್ನು ಸ್ಟೈಲಿಂಗ್ ಮಾಡಲು, ಸುರುಳಿಯಾಕಾರಗೊಳಿಸಲು ಕೆಲವರು ಬಿಸಿ ಮಾಡುವಂತಹ ಸಾಧನಗಳನ್ನು ಕೂದಲಿಗೆ ಬಳಸುತ್ತಾರೆ. ಇದರಿಂದ ಕೂದಲು ಸುಟ್ಟು ಹೋಗುತ್ತದೆ. ಇಂತಹ ಹಾನಿಗೊಳಗಾದ ಕೂದಲಿಗೆ ಮತ್ತೆ ಜೀವ ತುಂಬಲು ಈ ಹೇರ್ ಪ್ಯಾಕ್ ಹಚ್ಚಿ.

*ಬಾಳೆಹಣ್ಣು ಕೂದಲಿನ ಬೆಳವಣಿಗೆಗೆ ಸಹಕಾರಿ. ಇದು ಕೂದಲನ್ನು ನಯವಾಗಿಸಿ, ಮೃದುವಾಗಿಸುತ್ತದೆ. ಹಾಗಾಗಿ ಬಾಳೆಹಣ್ಣಿಗೆ ಜೇನುತುಪ್ಪ ಮಿಕ್ಸ್ ಮಾಡಿ ಹಚ್ಚಿ. ಇದು ಕೂದಲಿಗೆ ಕಂಡೀಷನರಂತೆ ಕೆಲಸ ಮಾಡುತ್ತದೆ. ಹಾಗೇ ಬಾಳೆಹಣ್ಣಿಗೆ ಮೊಟ್ಟೆಯನ್ನು ಮಿಕ್ಸ್ ಮಾಡಿ ಹಚ್ಚಿ. ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿರುವುದರಿಂದ ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ.

ಬಲವಾದ ಕೂದಲನ್ನು ಪಡೆಯಲು ಈ ಹೇರ್ ಪ್ಯಾಕ್ ಹಚ್ಚಿ

*ಮೊಸರು ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ಇದು ಹಾನಿಗೊಳಗಾದ ಕೂದಲಿಗೆ ಜೀವ ನೀಡುತ್ತದೆ. ಹಾಗಾಗಿ ಮೊಸರಿಗೆ ನಿಂಬೆ ಮತ್ತು ತೆಂಗಿನೆಣ್ಣೆ ಬೆರೆಸಿ ಕೂದಲಿಗೆ ಹಚ್ಚಿ. ಇದು ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ. ಮೊಸರು ಮತ್ತು ಮೊಟ್ಟೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿದರೆ ಇದು ಸುಟ್ಟ ಕೂದಲಿಗೆ ಹೊಳಪು ನೀಡುತ್ತದೆ.

Hair packs to revive heat damaged and lifeless hair


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...