Kannada Duniya

Hairfall remedy: ತಲೆಯ ಕೂದಲು ಉದುರುತ್ತಿದ್ದರೆ ತಕ್ಷಣ ಈ ಆಹಾರಗಳಿಂದ ದೂರವಿರಿ

ಕೆಟ್ಟ ಜೀವನಶೈಲಿ ಮತ್ತು ಆಹಾರದಿಂದ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಕೂದಲುದುರುವ ಸಮಸ್ಯೆ ಕೂಡ ಒಂದು. ಕೂದಲುದುರುವ ಸಮಸ್ಯೆ ಹೆಚ್ಚಾದರೆ ನೀವು ಬೊಕ್ಕ ತಲೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನಿಮ್ಮ ಕೂದಲು ಉದುರುತ್ತಿದ್ದರೆ ತಕ್ಷಣ ಈ ಆಹಾರಗಳಿಂದ ದೂರವಿರಿ.

 

ನಿಮ್ಮ ಕೂದಲು ಉದುರುತ್ತಿದ್ದರೆ ಜಂಕ್ ಫುಡ್ ಗಳನ್ನು ಸೇವಿಸಬೇಡಿ. ಇದರಿಂದ ಹಾರ್ಮೋನ್ ನಲ್ಲಿ ವ್ಯತ್ಯಾಸವಾಗುತ್ತದೆ. ಜಂಕ್ ಫುಡ್ ನಲ್ಲಿ ಸ್ಯಾಚುರೇಟೆಡ್ ಮತ್ತು ಮೊನೊಸ್ಯಾಚುರೇಟೆಡ್ ಕೊಬ್ಬುಗಳಿದ್ದು, ಇದರಿಂದ ಕೂದಲು ಉದುರುತ್ತದೆ.

 

ಮಾಲಿನ್ಯದ ಕಾರಣ ಮೀನುಗಳಲ್ಲಿ ಪಾದರಸದ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಇಂತಹ ಮೀನುಗಳನ್ನು ಸೇವಿಸುವುದರಿಂದ ನಿಮ್ಮ ಕೂದಲು ಉದುರಲು ಪ್ರಾರಂಭಿಸುತ್ತದೆ. ಹಾಗಾಗಿ ಮೀನನ್ನು ಸೇವಿಸಬೇಡಿ.

 

ಫಿಟ್ ನೆಸ್ ಹೆಚ್ಚಿಸಲು ಕೆಲವರು ಆಹಾರದಲ್ಲಿ ಸೋಡಾವನ್ನು ಸೇವಿಸುತ್ತಿದ್ದಾರೆ. ಆದರೆ ಇದರಲ್ಲಿರುವ ಸಿಹಿಕಾರಕ ಅಂಶ ಕೂದಲಿನ ಬುಡವನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ ಕೂದಲು ಉದುರುವುದನ್ನು ನಿಲ್ಲಿಸಲು ಸೋಡಾ ಬಳಕೆ ಕಡಿಮೆ ಮಾಡಿ.

 

‘ಆಲೂಗಡ್ಡೆ ಸ್ಟ್ಯೂ’ ಮಾಡುವ ವಿಧಾನ

 

ಮೊಟ್ಟೆಯ ಬಿಳಿಭಾಗವನ್ನು ಹಸಿಯಾಗಿ ಸೇವಿಸಬೇಡಿ. ಯಾಕೆಂದರೆ ಇದರಿಂದ ದೇಹದಲ್ಲಿ ಬಯೋಟಿನ್ ಕೊರತೆಯಾಗುತ್ತದೆ. ಬಯೋಟಿನ್ ಕೂದಲ ಬೆಳವಣಿಗೆಗೆ ಬೇಕಾಗುವ ಪ್ರೋಟೀನ್ ಅನ್ನು ಉತ್ಪಾದಿಸುತ್ತದೆ. ಬಯೋಟಿನ್ ಕೊರತೆಯಾದರೆ ಕೂದಲು ಉದುರುತ್ತದೆ. ಹಾಗಾಗಿ ಮೊಟ್ಟೆ ಬಿಳಿಭಾಗವನ್ನು ಬೇಯಿಸಿ ತಿನ್ನಿ.

 

Avoid eating these foods if you are facing hairfall


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...