Kannada Duniya

ರುಚಿರುಚಿಯಾದ ‘ಆಲೂಗಡ್ಡೆ ಸ್ಟ್ಯೂ’ ಮಾಡುವ ವಿಧಾನ ಇಲ್ಲಿದೆ ನೋಡಿ…!

ಆಪ್ಪಂ ದೋಸೆ ಜತೆ ಸವಿಯಲು ಆಲೂಗಡ್ಡೆ ಸ್ಟ್ಯೂ ಇದ್ದರೆ ತುಂಬಾ ರುಚಿಕರವಾಗಿರುತ್ತದೆ. ಇಲ್ಲಿ ಇದನ್ನು ಸುಲಭವಾಗಿ ಮಾಡುವ ವಿಧಾನ ಇದೆ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು :

ಆಲೂಗಡ್ಡೆ-3 (ಬೇಯಿಸಿದ್ದು), ಕ್ಯಾರೆಟ್-1 (ಚಿಕ್ಕದಾಗಿ ಕತ್ತರಿಸಿದ್ದು), ಎಣ್ಣೆ-2 ಟೀ ಸ್ಪೂನ್, ಚಕ್ಕೆ-1/2 ತುಂಡು. ಮೆಂತ್ಯಕಾಳು-ಚಿಟಿಕೆ, ಲವಂಗ-3, ಪಲಾವ್ ಎಲೆ-1, ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಟೀ ಸ್ಪೂನ್, ಈರುಳ್ಳಿ-1 (ಉದ್ದಕ್ಕೆ ಕತ್ತರಿಸಿಕೊಂಡಿದ್ದು), ಹಸಿಮೆಣಸು-2, ದಪ್ಪಗಿನ ತೆಂಗಿನಕಾಯಿ ಹಾಲು-1 ಕಪ್, ತೆಳ್ಳಗಿನ ತೆಂಗಿನಕಾಯಿ ಹಾಲು-2 ಕಪ್, ಉಪ್ಪು-ರುಚಿಗೆ ತಕ್ಕಷ್ಟು, ಕರಿಬೇವು-ಸ್ವಲ್ಪ.

‘ಇನ್ ಸ್ಟೆಂಟ್ ಕುರ್ಮಾ’ ಮಾಡುವ ವಿಧಾನ

ಮಾಡುವ ವಿಧಾನ:

ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಮೆಂತ್ಯಕಾಳು, ಪಲಾವ್ ಎಲೆ, ಚಕ್ಕೆ, ಲವಂಗ ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಇದಕ್ಕೆ ಈರುಳ್ಳಿ ಸೇರಿಸಿ. ಇದು ತುಸು ಬಾಡಿದ ಮೇಲೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು ಹಾಕಿ. 2 ನಿಮಿಷಗಳ ಕಾಲ ಬಾಡಿಸಿಕೊಳ್ಳಿ. ಬೇಯಿಸಿಟ್ಟುಕೊಂಡ ಆಲೂಗಡ್ಡೆಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ, ಉಪ್ಪು ಸೇರಿಸಿ ಅದಕ್ಕೆ ತೆಳ್ಳಗಿನ ಕಾಯಿ ಹಾಲು ಸೇರಿಸಿ ನಂತರ ಕ್ಯಾರೆಟ್ ಹಾಕಿ ಮಿಕ್ಸ್ ಮಾಡಿ ಒಂದು ಮುಚ್ಚಳ ಮುಚ್ಚಿ ಬೇಯಲು ಇಡಿ.ಇದು ಬೆಂದ ಬಳಿಕ ದಪ್ಪಗಿನ ತೆಂಗಿನಕಾಯಿ ಹಾಲು ಸೇರಿಸಿ ಕರಿಬೇವು ಹಾಕಿ 5 ನಿಮಿಷಗಳ ಬಳಿಕ ಗ್ಯಾಸ್ ಆಫ್ ಮಾಡಿ ಆಪ್ಪಂ ದೋಸೆ ಜತೆ ಬಿಸಿ ಬಿಸಿಯಾಗಿ ಸರ್ವ್ ಮಾಡಿ.

‘ಕೇರಳ ಸ್ಟೈಲ್ ಫಿಶ್ ಫ್ರೈ’ ಮಾಡುವ ವಿಧಾನ

Potato stew recipe to go with Appam


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...