Kannada Duniya

ಸೇಬು ಮತ್ತು ಕ್ಯಾರೆಟ್ ನಲ್ಲಿ ಯಾವುದು ಉತ್ತಮ?

ನೀವು ಆರೋಗ್ಯವಾಗಿರಲು ಪ್ರತಿದಿನ ಒಂದು ಸೇಬು ಹಣ್ಣನ್ನು ಸೇವಿಸುವಂತೆ ಹೇಳಲಾಗುತ್ತದೆ. ಆದರೆ ಕ್ಯಾರೆಟ್ ಸೇಬು ಹಣ್ಣಿಗಿಂತ ಉತ್ತಮ ಎಂಬುದಾಗಿ ತಿಳಿದುಬಂದಿದೆ. ಕ್ಯಾರೆಟ್ ಸೇವಿಸುವುದರಿಂದ ಸೇಬು ಸೇವನೆಗಿಂತ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದಂತೆ.

ಕ್ಯಾರೆಟ್ ನಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಸೇಬು ಹಣ್ಣಿಗಿಂತ ಕಡಿಮೆ ಇದೆಯಂತೆ. ಹಾಗಾಗಿ ಕ್ಯಾರೆಟ್ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ.

ಅಲ್ಲದೇ ಸೇಬು ಮತ್ತು ಕ್ಯಾರೆಟ್ ನಲ್ಲಿ ಪ್ರೋಟೀನ್ ಇರುತ್ತದೆ. ಆದರೆ ಕ್ಯಾರೆಟ್ ನಲ್ಲಿ ಸೇಬುಗಿಂತ ಒಂದು ಪಟ್ಟು ಜಾಸ್ತಿ ಪ್ರೋಟೀನ್ ಇದೆಯಂತೆ.

ಸೇಬಿನಲ್ಲಿ ಫೈಬರ್ ಸಮೃದ್ಧವಾಗಿದೆ. ಆದರೆ ಕ್ಯಾರೆಟ್ ನಲ್ಲಿ ಕರಗದ ಮತ್ತು ಕರಗಬಲ್ಲ ಪ್ರೋಟೀನ್ ಇದೆ. ಇದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ.

ಕ್ಯಾರೆಟ್ ನಲ್ಲಿ ಸೇಬಿಗಿಂತ 3 ಪಟ್ಟು ಹೆಚ್ಚು ಕ್ಯಾಲ್ಸಿಯಂ ಇದೆ. ಹಾಗಾಗಿ ಕ್ಯಾರೆಟ್ ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತದೆ.

ಕ್ಯಾರೆಟ್ ನಲ್ಲಿ ಕಬ್ಬಿಣಾಂಶ ಮತ್ತು ಪೊಟ್ಯಾಶಿಯಂ ಉತ್ತಮವಾಗಿದೆ. ಇದನ್ನು ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆ ಕಾಡುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...