Kannada Duniya

ಚಳಿಗಾಲದಲ್ಲಿ ಕೈಯ ಚರ್ಮ ಒಣಗುತ್ತಿದ್ದರೆ ಅದನ್ನು ಮೃದುವಾಗಿಸಲು ಇದನ್ನು ಹಚ್ಚಿ

ಚಳಿಗಾಲದಲ್ಲಿ ವಾತಾವರಣ ಶುಷ್ಕವಾಗಿರುವ ಕಾರಣ ಚರ್ಮ ಬೇಗ ಒರಟಾಗುತ್ತದೆ. ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಅಲ್ಲದೇ ಮಹಿಳೆಯರು ಹೆಚ್ಚಾಗಿ ಪಾತ್ರೆ ತೊಳೆಯಲು, ಬಟ್ಟೆ ತೊಳೆಯುವ ಕೆಲಸ ಮಾಡುತ್ತಲೇ ಇರುವುದರಿಂದ ಅವರ ಕೈಗಳ ಚರ್ಮ ಬೇಗನೆ ಒರಟಾಗುತ್ತದೆ. ಹಾಗಾಗಿ ಅದನ್ನು ಮೃದುವಾಗಿಸಲು ಇದನ್ನು ಹಚ್ಚಿ.

ಕೈಗಳನ್ನು ಮೃದುವಾಗಿಸಲು ಕೆಲಸಗಳನ್ನು ಮುಗಿಸಿದ ನಂತರ ರೋಸ್ ವಾಟರ್ ಮತ್ತು ಅಲೋವೆರಾ ಜೆಲ್ ಅನ್ನು ಬೆರೆಸಿ ಕೈಗಳಿಗೆ ಹಚ್ಚಿ. ಇದು ಚರ್ಮದ ತೇವಾಂಶವನ್ನು ಕಾಪಾಡುತ್ತದೆ.

ಹಾಲು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಕೈಗಳ ಚರ್ಮ ಒರಟಾಗುವುದನ್ನು ತಡೆಯಲು ಹಾಲಿನ ಕೆನೆಗಳನ್ನು ಕೈಗಳಿಗೆ ಹಚ್ಚಿ. ನಂತರ ಉಗುರು ಬೆಚ್ಚಗಿರುವ ನೀರಿನಿಂದ ತೊಳೆಯಿರಿ. ಇದರಿಂದ ಕೈಗಳ ಅಂದ ಹೆಚ್ಚಾಗುತ್ತದೆ.

ಅಲ್ಲದೇ ಕೈಗಳ ತೇವಾಂಶವನ್ನು ಕಾಪಾಡಿಕೊಳ್ಳಲು ತೆಂಗಿನೆಣ್ಣೆಯನ್ನು ಹಚ್ಚಿ. ತೆಂಗಿನೆಣ್ಣೆಯನ್ನು ಉಗುರು ಬೆಚ್ಚಗೆ ಮಾಡಿಕೊಂಡು ಕೈಗಳಿಗೆ ಮಸಾಜ್ ಮಾಡಿ. ಇದನ್ನು ದಿನಕ್ಕೆ 2 ಬಾರಿ ಮಾಡಿದರೆ ಒಳ್ಳೆಯದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...