Kannada Duniya

ಪಾಲಕರೇ ಎಚ್ಚೆತ್ತುಕೊಳ್ಳಿ, ಮಕ್ಕಳು ನೋಡ್ತಿದ್ದಾರೆ ಯೂಟ್ಯೂಬ್..!

ಉಳಿದ ದೇಶಗಳಂತೆ ಭಾರತದಲ್ಲೂ ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವ ನಿಟ್ಟಿನಲ್ಲಿ ತಂದೆ, ತಾಯಿ ಇಬ್ಬರೂ ಕೆಲಸಕ್ಕೆ ಹೋಗ್ತಾರೆ. ಆದ್ರೆ ಪಾಲಕರ ಈ ಕೆಲಸದ ಒತ್ತಡ ಮಕ್ಕಳು ಹಾದಿ ತಪ್ಪುವಂತೆ ಮಾಡ್ತಾ ಇದೆ. ವಯಸ್ಕರ ಸೈಟ್ ವೀಕ್ಷಿಸುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಾ ಇದೆ.
 
13 ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸುವಂತಿಲ್ಲ. ಆದ್ರೆ ಇದರ ಮೇಲೆ ನಿಗಾ ಇಡುವವರು ಹಾಗೂ ತಂತ್ರಜ್ಞಾನದ ಕೊರತೆ ಇರುವುದರಿಂದ 7-13 ವರ್ಷದ ಶೇಕಡಾ 76 ರಷ್ಟು ಮಕ್ಕಳು ಆನ್ಲೈನ್ ನಲ್ಲಿ ಅಶ್ಲೀಲ ವೀಡಿಯೋ ವೀಕ್ಷಿಸುತ್ತಿದ್ದಾರೆ.
 
ಯೂಟ್ಯೂಬ್ ನಲ್ಲಿ ಅಕೌಂಟ್ ತೆರೆಯಬೇಕೆಂದ್ರೆ 18 ವರ್ಷ ಆಗಿರಬೇಕೆಂಬ ನಿಯಮ ಇದೆ. ಆದ್ರೆ ಪಾಲಕರ ಸಹಾಯದಿಂದ ಐದು ವರ್ಷದ ಮಕ್ಕಳು ಯೂಟ್ಯೂಬ್ ವೀಕ್ಷಿಸುತ್ತಾರೆ. ವರದಿ ಪ್ರಕಾರ 13 ವರ್ಷ ವಯಸ್ಸಿನ ಶೇಕಡಾ 76 ರಷ್ಟು ಮಕ್ಕಳು, 11 ವರ್ಷ ವಯಸ್ಸಿನ ಶೇಕಡಾ 69 ರಷ್ಟು  ಮಕ್ಕಳು, 10 ವರ್ಷ ವಯಸ್ಸಿನ ಶೇಕಡಾ 65 ರಷ್ಟು ಮಕ್ಕಳು ಪ್ರತಿದಿನ ಯೂಟ್ಯೂಬ್ ನಲ್ಲಿ ವೀಡಿಯೋ ವೀಕ್ಷಿಸ್ತಾರೆ. ಎಂಟರಿಂದ ಒಂಭತ್ತು ವರ್ಷ ವಯಸ್ಸಿನ ಶೇಕಡಾ 40ರಿಂದ 50 ರಷ್ಟು ಮಕ್ಕಳು ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿದ್ದಾರೆಂದು ವರದಿ ಹೇಳಿದೆ.
ಆನ್‌ಲೈನ್‌ನಲ್ಲಿ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಮತ್ತು ಆನಂದಿಸಿ !!!

Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...