Kannada Duniya

ಸಂಬಂಧದಲ್ಲಿ ಪ್ರೀತಿ ಮಾತ್ರವಲ್ಲ ಈ ವಿಷಯಗಳು ಬಹಳ ಮುಖ್ಯ

ಸಂಬಂಧದಲ್ಲಿ ಪ್ರೀತಿ ಬಹಳ ಮುಖ್ಯ ಎನ್ನುತ್ತಾರೆ. ಆದರೆ ಸಂಬಂಧ ಗಟ್ಟಿಯಾಗಿರಲು ಪ್ರೀತಿ ಒಂದೇ ಮುಖ್ಯ ಆಗುವುದಿಲ್ಲ. ಅದರ ಜೊತೆಗೆ ಕೆಲವು ವಿಷಯಗಳು ಮುಖ್ಯವಾಗುತ್ತದೆ. ಅವುಗಳಲ್ಲಿ ಕೊರತೆಯಾದರೂ ಸಂಬಂಧ ಕೆಡುತ್ತದೆಯಂತೆ. ಹಾಗಾದ್ರೆ ಅವು ಯಾವುದೆಂಬುದನ್ನು ತಿಳಿದುಕೊಳ್ಳಿ.

ಗೌರವ : ದಂಪತಿಗಳು ಸಂಬಂಧದಲ್ಲಿ ಒಬ್ಬರು ಇನ್ನೊಬ್ಬರಿಗೆ ಗೌರವವನ್ನು ನೀಡಬೇಕು. ಒಂದು ವೇಳೆ ಅಸಭ್ಯವಾಗಿ ವರ್ತಿಸಿದರೆ ಇದರಿಂದ ಸಂಬಂಧ ಕೆಡಬಹುದು.

ಭಾವನಾತ್ಮಕ ಮಾತುಕತೆ : ಸಂದರ್ಭದಲ್ಲಿ ಇದು ಬಹಳ ಮುಖ್ಯವಾಗುತ್ತದೆ. ಸಂಗಾತಿಯ ಮೇಲೆ ಪ್ರೀತಿ ಇದ್ದರೆ ಸಾಕಾಗುವುದಿಲ್ಲ. ಜೊತೆಗೆ ಅವರ ಜೊತೆ ಭಾವನಾತ್ಮಕವಾಗಿ ಮಾತನಾಡಬೇಕು. ಇಲ್ಲವಾದರೆ ಅವರಲ್ಲಿ ಅನುಮಾನ ಮೂಡುತ್ತದೆ. ಇದು ಸಂಬಂಧವನ್ನು ಕೆಡಿಸುತ್ತದೆ.

ಸುರಕ್ಷಿತ ಭಾವನೆ ಮೂಡಿಸುವುದು : ಸಂಗಾತಿಗೆ ಹೆದರಿಸುವ,ಬೆದರಿಸುವಂತಹ ಕೆಲಸಗಳನ್ನು ಮಾಡಬಾರದು. ಇದರಿಂದ ಅವರಲ್ಲಿ ಅಸುರಕ್ಷಿತ ಭಾವನೆ ಮೂಡುತ್ತದೆ. ಇದರಿಂದ ನಿಮ್ಮ ಸಂಬಂಧ ಮುರಿಯಬಹುದು.

ಬೆಂಬಲ : ಸಂಗಾತಿ ಇಬ್ಬರು ಒಬ್ಬರು ಇನ್ನೊಬ್ಬರಿಗೆ ಬೆಂಬಲವನ್ನು ನೀಡಬೇಕು. ಯಾವುದೇ ಕೆಲಸ ಮಾಡುವಾಗ ಅಥವಾ ಯಾವುದೇ ಸಮಸ್ಯೆ ಎದುರಾದರೂ ಒಬ್ಬರು ಇನ್ನೊಬ್ಬರಿಗೆ ಬೆಂಬಲವನ್ನು ನೀಡಿದರೆ ನಿಮ್ಮ ನಡುವಿನ ಸಂಬಂಧ ಗಟ್ಟಿಗೊಳ್ಳುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...