Kannada Duniya

ಸಂಸಾರದ ಬಿರುಕಿಗೆ ಇವೇ ಮುಖ್ಯ ಕಾರಣ!

ಇತ್ತೀಚಿನ ದಿನಗಳಲ್ಲಿ ಡೈವೋರ್ಸ್ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ. ದಾಂಪತ್ಯ ಸರಿಯಾಗಿ ಸಾಗದೆ ಇದ್ದಾಗ ಮನಸ್ತಾಪಗಳು ಕಾಣಿಸಿಕೊಳ್ಳುವುದು ನಿಶ್ಚಿತ.
ಅಂತಹ ಸಂದರ್ಭದಲ್ಲಿ ಯಾರಾದರೂ ಒಬ್ಬರು ಅನುಸರಿಸಿಕೊಂಡು ಹೋಗದಾಗ ದಾಂಪತ್ಯ ಮುರಿದು ಬೀಳುತ್ತದೆ.

ಸಾಮಾನ್ಯವಾಗಿ ಅನ್ಯೋನ್ಯತೆಯ ಕೊರತೆ ಡೈವೋರ್ಸ್ ಗೆ ಮುಖ್ಯ ಕಾರಣ ಎನ್ನಲಾಗಿದೆ. ದೈಹಿಕ ಹಾಗೂ ಭಾವನಾತ್ಮಕವಾಗಿ ದೂರವಾಗುವುದು, ಪ್ರೀತಿ
ಇಲ್ಲದೆ ಬದುಕುವುದು ಬಹಳ ಕಷ್ಟ ಎಂಬುದು ಅರಿವಾಗುತ್ತಲೇ ಸಂಗಾತಿಗಳಲ್ಲಿ ಒಬ್ಬರು ಡೈವೋರ್ಸ್ ಪಡೆಯಲು ಮುಂದಾಗುತ್ತಾರೆ.

ಇನ್ನು ಕೆಲವೊಮ್ಮೆ ದಾಂಪತ್ಯದ್ರೋಹವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಕಾರಣವಾಗುತ್ತದೆ. ಪಾಲುದಾರರಲ್ಲಿ ಒಬ್ಬರು ಮೋಸ ಮಾಡಿದಾಗ ನಂಬಿಕೆ ಮುರಿದು
ಬೀಳುತ್ತದೆ. ಒಮ್ಮೆ ವಿಶ್ವಾಸ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಬಹಳ ಕಷ್ಟ.

ಅದೇ ರೀತಿ ದಂಪತಿಗಳ ಮಧ್ಯ ಸಂವಹನದ ಕೊರತೆಯೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಜಗಳ ಅಥವಾ ಸಮಾಧಾನ ಹೆಚ್ಚಿದಾಗ ಸಂಗಾತಿಗಳಲ್ಲಿ ಒಬ್ಬರು ಮೌನವಾಗಿರುವುದು ಸಂವಹನದ ಕೊರತೆಗೆ ಕಾರಣವಾಗುತ್ತದೆ.

ಇನ್ನೂ ಕೆಲವೊಮ್ಮೆ ಹಣಕಾಸಿನ ತೊಂದರೆಗಳು ಕೂಡ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಆರ್ಥಿಕವಾಗಿ ಸದೃಢರಾಗಿದೆ ಇರುವುದರಿಂದ ಸಂಸಾರದ ಜವಾಬ್ದಾರಿ ಹೊರುವುದು ಕಷ್ಟವಾಗಬಹುದು. ಹಾಗಾಗಿ ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುವುದು ಬಹಳ ಮುಖ್ಯ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...