Kannada Duniya

ನಿಮ್ಮ ಮಗು ಕೈಗೆ ಸಿಕ್ಕಿದ್ದನ್ನೆಲ್ಲಾ ಎಸೆಯುತ್ತಿದೆಯಾ….? ಇದಕ್ಕೆ ಕಾರಣವೇನು ಬಲ್ಲಿರಾ….?

ಕೆಲವು ಮಕ್ಕಳು ಕೈಗೆ ಏನೇ ಸಿಕ್ಕರು ಅದನ್ನು ಎಸೆಯುವ ಅಭ್ಯಾಸ ಹೊಂದಿರುತ್ತಾರೆ. ಇದಕ್ಕೆ ಹಲವು ಕಾರಣಗಳಿರಬಹುದು ಎನ್ನುತ್ತದೆ ಮನೋವಿಜ್ಞಾನ ಕ್ಷೇತ್ರ. ಇದರಿಂದ ಅವರ ಮೇಲೆ ಕೋಪಗೊಳ್ಳದೇ ಅದಕ್ಕೆ ಕಾರಣವೇನು…? ಹೇಗೆ ಪರಿಹರಿಸಿಕೊಳ್ಳುವುದು ಎಂದು ಯೋಚಿಸಿದರೆ ಒಳಿತು.

ಮಕ್ಕಳು ಮಾತನಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಈ ಅವಧಿಯಲ್ಲಿ ಅವರಿಗೆ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಸುಲಭ ದಾರಿ ಎಂದರೆ ಕೈಗೆ ಸಿಕ್ಕಿದ್ದನ್ನು ಎಸೆಯುವುದು. ಹಸಿವನ್ನು ತೋರ್ಪಡಿಸಲು, ಇಷ್ಟವಿಲ್ಲದ್ದನ್ನು ಹೇಳಲು ಅವರು ವಸ್ತುಗಳನ್ನು ಎಸೆಯಬಹುದು.

ನೀವು ಮಕ್ಕಳತ್ತ ಸಾಕಷ್ಟು ಗಮನ ಕೊಡುತ್ತಿಲ್ಲ ಎಂದಾದಾಗ ಅವರು ಕಿರುಚಬಹುದು ಇಲ್ಲವೇ ಕೂಗಾಡಬಹುದು. ನೀವು ಅದಕ್ಕೂ ಪ್ರತಿಕ್ರಿಯೆ ನೀಡದಾಗ ಅವರು ಕೈಗೆ ಸಿಕ್ಕ ವಸ್ತುವನ್ನು ಎಸೆದು ನಿಮ್ಮ ಗಮನವನ್ನು ಅವರತ್ತ ಸೆಳೆಯಬಹುದು.

ಕೆಲವೊಮ್ಮೆ ಇದು ಅನುಕರಣೆಯ ಭಾಗವೂ ಅಗಿರಬಹುದು. ಅಂದರೆ ಚೆಂಡನ್ನು ಎಸೆಯುವ ಇತರ ವ್ಯಕ್ತಿಯನ್ನು ಕಂಡ ಮಗು ಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲಾ ಎಸೆಯಲು ಆರಂಭಿಸಬಹುದು. ಹಾಗಾಗಿ ಇದು ಕಲಿಕೆಯ ಭಾಗವೂ ಆಗಿರಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...