Kannada Duniya

ಗಂಡನ ಈ ಗುಣ ಹೆಂಡತಿಗೆ ಇಷ್ಟವಾಗುವುದಿಲ್ಲವಂತೆ! ಆ ಗುಣ ಯಾವುದು ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ

ಪತಿ-ಪತ್ನಿಯರು ಎಂದ ಮೇಲೆ ಸಾಕಾಷ್ಟು ಭಿನ್ನಾಭಿಪ್ರಾಯಗಳು ಇದ್ದೆ ಇರುತ್ತೇವೆ. ಆದರೆ ಕೆಲವೊಮ್ಮೆ ಹೆಂಡತಿಗೆ ತನ್ನ ಗಂಡನ ಈ ರೀತಿಯ ನಡವಳಿಕೆಗಳು ಇಷ್ಟವಾಗುವುದಿಲ್ಲವಂತೆ. ಅಂತಹ ವಿಚಾರಗಳು ಯಾವುದು ಎಂಬುದನ್ನು ತಿಳಿಯೋಣ.ಇದರಿಂದ ಗಂಡನಿಗೆ ಹೆಂಡತಿಯ ಮನಸ್ಸು ತಿಳಿಯಲು ಸಾಧ್ಯವಾಗುತ್ತದೆ.

ತಾವು ಧರಿಸಿದ ಬಟ್ಟೆಗಳನ್ನು ಅಥವಾ ಸ್ನಾನ ಮಾಡಿ ಬಂದ ಟವೆಲ್ ಅನ್ನು ಎಲ್ಲೆಂದರಲ್ಲಿ ಎಸೆಯುವುದು ಪತ್ನಿಗೆ ಇಷ್ಟವಾಗುವುದಿಲ್ಲ ಹಾಗೂ ವಿಪರೀತ ಸಿಟ್ಟು ತರಿಸುತ್ತದೆ. ಇದೇ ಕಾರಣಕ್ಕೆ ಹಲವು ಬಾರಿ ದಂಪತಿಗಳ ಮಧ್ಯೆ ಜಗಳವೂ ನಡೆಯುತ್ತದಂತೆ.

ಅದೇ ರೀತಿ ಯಾವುದೋ ಪ್ರಶ್ನೆ ಕೇಳಿದಾಗ, ಅಥವಾ ಅಭಿಪ್ರಾಯ ಹಂಚಿಕೊಂಡಾಗ ಪತಿ ಪ್ರತಿಕ್ರಿಯೆ ನೀಡದೆ ಮೊಬೈಲ್ ಅನ್ನೇ ನೋಡುತ್ತಿರುವುದು ಕೂಡಾ ಆಕೆಯ ಸಿಟ್ಟನ್ನು ಹೆಚ್ಚಿಸುತ್ತದೆ. ನೀವು ಆಕೆಯನ್ನು ಕಡೆಗಣಿಸುತ್ತಿದ್ದೀರಿ ಎಂದು ಅವರಿಗೆ ಅನಿಸುತ್ತದೆ.

ಶೇವಿಂಗ್ ಮಾಡಿಕೊಂಡ ಬಳಿಕ ಸಿಂಕ್ ಅನ್ನು ಸರಿಯಾಗಿ ಶುಚಿ ಮಾಡದೆ ಬಿಡುವುದು, ಸದಾ ಕಾಲ ಮಕ್ಕಳಂತೆ ವರ್ತಿಸುವುದು, ದಿನವಿಡೀ ಮೊಬೈಲ್ ಬಳಸುವುದು ಅಥವಾ ಅನಗತ್ಯವಾಗಿ ಮಾತನಾಡುತ್ತಿರುವುದು ಆಕೆಗೆ ವಿಪರೀತ ಸಿಟ್ಟು ತರಿಸುತ್ತದಂತೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...