Kannada Duniya

ಮಕ್ಕಳನ್ನು ಗದರಿಸುವಾಗ ಇಂತಹ ವಿಷಯಗಳನ್ನು ಅಪ್ಪಿತಪ್ಪಿಯೂ ಹೇಳಬೇಡಿ!

ಮಕ್ಕಳು ತಪ್ಪು ಮಾಡಿದಾಗ ಹೆತ್ತವರು ಬೈಯುವುದು ಸಹಜ. ಆದರೆ ಕೆಲವೊಮ್ಮೆ ಹೆತ್ತವರು ಮಕ್ಕಳಿಗೆ ಬೈಯುವಾಗ ಹೇಳುವ ಮಾತುಗಳು ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡಬಹುದು. ಹಾಗಾಗಿ ಹೆತ್ತವರು ಮಕ್ಕಳನ್ನು ಗದರಿಸುವಾಗ ಇಂತಹ ವಿಷಯಗಳನ್ನು ಅಪ್ಪಿತಪ್ಪಿಯೂ ಹೇಳಬೇಡಿ.

ಹೆತ್ತವರು ಮಕ್ಕಳನ್ನು ಬೈಯುವಾಗ ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ಇದು ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಇದರಿಂದ ಮಕ್ಕಳು ಬೇರೆಯವರ ಮೇಲೆ ಅಸೂಯೆ ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ.

ಹಾಗೇ ಹೆತ್ತವರು ಮಕ್ಕಳಿಗೆ ಬೈಯುವಾಗ ನೀವು ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಬೇಡಿ. ಇದರಿಂದ ಮಕ್ಕಳಿಗೆ ಮುಂದೆ ಸಾಧನೆ ಮಾಡಲು ಪ್ರೇರಣೆ ಕಡಿಮೆಯಾದಂತಾಗುತ್ತದೆ. ಹಾಗೇ ಮುಂದೆ ಅವರು ಏನನ್ನಾದರೂ ಸಾಧಿಸಿದರೂ ಅದರ ಕ್ರೆಡಿಟ್ ನಿಮಗೆ ನೀಡುವುದಿಲ್ಲ.

ಹಾಗೇ ಹುಡುಗರನ್ನು ಹುಡುಗಿಯಂದು ಹಾಗೂ ಹುಡುಗಿಯನ್ನು ಹುಡುಗನೆಂದು ಹೀಯಾಳಿಸಬೇಡಿ. ಇದರಿಂದ ಅವರಲ್ಲಿ ಲಿಂಗದ ಬಗ್ಗೆ ತಾರತಮ್ಯ ಮೂಡಲು ಕಾರಣವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...