Kannada Duniya

ಮನೆಯೊಡತಿಯ ಈ ನಡೆಗಳಿಗೆ ಮಾಂತ್ರಿಕ ಶಕ್ತಿಯಿದೆ!

ನಿಜವಾದ ಅರ್ಥದಲ್ಲಿ ಮನೆಯೊಡತಿ ಎಂದರೆ ಮನೆಯ ಗೃಹಿಣಿ. ಆಕೆಯ ಈ ಕೆಲವು ಗುಣಗಳೇ ಮನೆಯನ್ನು ಸಂತೋಷದಿಂದ ಇಡಲು ನೆರವಾಗಬಹುದು. ಮನೆಯೊಡತಿ ಸಂತೋಷವಾಗಿದ್ದರೆ ಮನೆಮಂದಿಯ ಆರೋಗ್ಯವೂ ಚೆನ್ನಾಗಿರುತ್ತದೆ. ಎಲ್ಲರ ಮನಸ್ಸು ಖುಷಿಯಿಂದ ಇರುತ್ತದೆ. ಹಾಗಾದ್ರೆ ಅಂತಹ ಗುಣಗಳು ಯಾವುದು ಎಂದು ಯೋಚಿಸುತ್ತಿದ್ದೀರಾ…? ಇಲ್ಲಿದೆ ನೋಡಿ ಮಾಹಿತಿ!

ಮನೆಯೊಡತಿಗೆ ಪ್ರತಿಯೊಬ್ಬರನ್ನೂ ಗೌರವಿಸುವ ಗುಣವಿದ್ದರೆ ದೊಡ್ಡವರಿಂದ ಹಿಡಿದು ಚಿಕ್ಕವರ ತನಕ ಪ್ರತಿಯೊಬ್ಬರೂ ಮನೆಯಲ್ಲಿ ಸಂತಸದಿಂದ ಇರುತ್ತಾರೆ. ಸಿಟ್ಟಿನಲ್ಲೂ ಅಗೌರವ ತೋರದ ಆಕೆಯ ಗುಣದಿಂದ ಹಾಳಾದ ಸಂಬಂಧಗಳು ಸುಧಾರಿಸುತ್ತವೆ.

ಶಾಂತ ಮನಸ್ಸಿನ ಮಹಿಳೆ ಯಾವ ಸಂದರ್ಭದಲ್ಲಿಯೂ ಸಿಟ್ಟು ಮಾಡುವುದಿಲ್ಲ ಹಾಗೂ ತೋರಿಸಿಕೊಳ್ಳುವುದಿಲ್ಲ. ಸ್ಥಳ ಮತ್ತು ಸಮಯಕ್ಕೆ ಅನುಗುಣವಾಗಿ ಆಕೆ ಪ್ರತಿಯೊಂದನ್ನೂ ನಿಭಾಯಿಸುತ್ತಾಳೆ. ಪತಿಯ ಜೀವನವನ್ನು ಸುಲಭಗೊಳಿಸುತ್ತಾಳೆ.

ಆತುರದ ನಿರ್ಧಾರಗಳು ಕೆಲಸವನ್ನು ಹಾಳು ಮಾಡಬಹುದು. ತಾಳ್ಮೆಯಿಂದ ಕೆಲಸ ಮಾಡುವವ ಕೆಟ್ಟ ಸಂದರ್ಭದಲ್ಲೂ ಉತ್ತಮ ಗುಣಮಟ್ಟದ ಫಲಿತಾಂಶ ನೀಡುತ್ತಾನೆ. ಹೀಗಾಗಿ ಮನೆಯೊಡತಿ ತಾಳ್ಮೆಯನ್ನು ಮೈಗೂಡಿಸಿಕೊಂಡರೆ ಸಂಸಾರದ ನೌಕೆ ಎಲ್ಲೂ ಮುಳುಗದೆ ತೇಲುತ್ತಾ ಸಾಗಿ ದಡ ಸೇರುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...