Kannada Duniya

ನೀವು ಕೂಡ ‘ಮಾಮ್ ಗಿಲ್ಟ್’ ನಿಂದ ಬಳಲುತ್ತಿದ್ದೀರಾ…?

ಮಗುವಾದ ಬಳಿಕ ತಾಯಂದಿರನ್ನು ಕಾಡುವ ಸಾಮಾನ್ಯ ಸಮಸ್ಯೆಗಳಲ್ಲಿ ಮಾಮ್ ಗಿಲ್ಟ್ ಕೂಡಾ ಒಂದು. ಮಗುವಿಗೆ ಸ್ವಲ್ಪ ನೋವಾದರೆ ಅದಕ್ಕೆ ತಾನೇ ಜವಾಬ್ದಾರಿ ಎಂದುಕೊಂಡು ತನ್ನನ್ನು ತಾನು ಶಪಿಸಿಕೊಳ್ಳುತ್ತಲೇ ಇರುತ್ತಾಳೆ. ಮಗುವಿಗೆ ತನ್ನಿಂದಲೇ ಈ ತೊಂದರೆಯಾಗಿದೆ ಎಂದು ಭಾವಿಸುತ್ತಾಳೆ.

ತಾಯಿ ಒಮ್ಮೆ ಕಚೇರಿಗೆ ತೆರಳಿದ ಬಳಿಕ ಮಗುವನ್ನು ತುಂಬಾ ಮಿಸ್ ಮಾಡಿಕೊಳ್ಳುವುದು ಸಹಜ. ಅದೇ ಕೆಲಸದಿಂದ ಮರಳಿದ ಬಳಿಕ ತಾನು ಮಗುವಿಗೆ ಕೊಡಬೇಕಾದ ಸಮಯವನ್ನು ಕೊಟ್ಟಿದ್ದೇನೋ ಇಲ್ಲವೋ ಎಂಬ ಗಿಲ್ಟ್ ಆಕೆಯನ್ನು ಕಾಡುತ್ತದೆ ಹಾಗೂ ಮಗುವಿನ ಬಗ್ಗೆ ಹೆಚ್ಚು ಪೊಸೆಸಿವ್ ನೆಸ್ ಬೆಳೆಸಿಕೊಳ್ಳುತ್ತಾಳೆ.

ಮಗು ಸಣ್ಣ ತಪ್ಪು ಮಾಡಿದಾಗ, ಇತರರು ಮಗುವನ್ನು ತಾಯಿ ಸರಿಯಾಗಿ ಬೆಳಸಲಿಲ್ಲ ಎಂದು ದೂರಿದಾಗ ಮತ್ತೆ ಆಕೆ ಇದೇ ನೋವು ಅನುಭವಿಸುತ್ತಾಳೆ. ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸಲಾಗದ ಗೊಂದಲದಲ್ಲಿ ಬೀಳುತ್ತಾಳೆ.

ಮಗು ತಪ್ಪು ಮಾಡಿದಾಗ, ತಾಳ್ಮೆ ಕಳೆದುಕೊಂಡು ಮಗುವಿಗೆ ಎರಡೇಟು ಹೊಡೆದಾಗ ತಾನು ತಪ್ಪು ಮಾಡಿದೆನೋ ಎಂಬ ಸಂಶಯ ಆಕೆಯನ್ನು ಕಾಡುತ್ತದೆ. ಹಾಗೂ ಅಪರಾಧಿ ಭಾವ ಹಿಂಸೆ ನೀಡುತ್ತದೆ. ಸಮಾಜ ಹಾಗೂ ಕುಟುಂಬದ ನಿರೀಕ್ಷೆಗೆ ತಕ್ಕನಾಗಿ ಬದುಕಲು ಸಾಧ್ಯವಾಗದೇ ಹೋದಾಗಲೂ ಈ ನೋವು ಕಾಡುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...