Kannada Duniya

ಅಂದ ಹಾಗೆ, ನಿಮ್ಮ ಮದುವೆ ಯಾವಾಗ?

ಹೋದಲ್ಲಿ ಬಂದಲ್ಲಿ ಕೇಳುವ ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿ ಸಾಕಾಗಿದೆಯೇ? ಹಾಗಿದ್ದರೆ ಇಲ್ಲಿ ಕೇಳಿ. ಹೀಗೆ ಪ್ರಶ್ನಿಸುವ ಸಂಬಂಧಿಕರನ್ನು ಚಾಣಾಕ್ಷತನದಿಂದ ಹೇಗೆ ನಿಭಾಯಿಸಬಹುದು ಎಂಬುದನ್ನು ಕಲಿಯಿರಿ.

ಸಣ್ಣ ವಿಷಯಗಳನ್ನು ದೊಡ್ಡದಾಗಿ ನೋಡುವ, ಮಾತನಾಡುವ ಸಂಬಂಧಿಕರಿಂದ ಸಾಧ್ಯವಾದಷ್ಟು ದೂರವಿರಿ. ಅದು ಆಗದಾಗ ಅವರ ಮಾತನ್ನು ನಿರ್ಲಕ್ಷಿಸಿ. ನೀವು ಅವರ ಪ್ರಶ್ನೆಗೆ ಉತ್ತರಿಸಿದಾಗ ಮತ್ತೊಂದು ಪ್ರಶ್ನೆ ಮೂಡುತ್ತದೆಯೇ ಹೊರತು, ಅವರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿಯಿರಿ.

ಮತ್ತೆ ಮತ್ತೆ ಇದು ಪುನರಾವರ್ತಿಸಿದಾಗ ಮದುವೆ ಎಂಬುದು ನಿಮ್ಮ ವೈಯಕ್ತಿಕ ವಿಚಾರ ಎಂಬುದನ್ನು ಸ್ಪಷ್ಟಪಡಿಸಿ. ಯಾರ ಪ್ರಭಾವದಿಂದಲೂ ಅಥವಾ ಕೆಟ್ಟ ಘಟನೆಯಿಂದಲೋ ನೀವು ಮದುವೆಯಾಗದೆ ಉಳಿದಿಲ್ಲ ಎಂಬುದನ್ನು ಅವರಿಗೆ ವಿವರಿಸಿ ಹೇಳಿ.

ಶಾಂತ ಮನಸ್ಸಿನಿಂದ ಮಾತನಾಡಿ. ಅಂದರೆ ನಿಮ್ಮ ಜೀವನ ನಿರ್ಧಾರಗಳನ್ನು ತೆಗೆದುಕೊಳ್ಳುವವರು ನೀವೇ ಹೊರತು ಅವರಲ್ಲ ಎಂಬುದನ್ನು ಸ್ಪಷ್ಟಪಡಿಸಿ. ಅದೇ ರೀತಿ ಅವರ ಇತಿಮಿತಿಗಳನ್ನು ಅರಿತು ಮಾತನಾಡುವಂತೆ ಸೂಚಿಸಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...