Kannada Duniya

ನಿಮ್ಮ ಸಂಬಂಧಿಕರು ನಿಮ್ಮನ್ನು ಗೇಲಿ ಮಾಡುವುದುನ್ನು ತಪ್ಪಿಸಲು ಈ ಸಲಹೆ ಪಾಲಿಸಿ

ಮನೆಗೆ ಕೆಲವೊಮ್ಮೆ ಸಂಬಂಧಿಕರು ಬರುತ್ತಾರೆ. ಅವರ ಮುಂದೆ ನಾವು ಸರಿಯಾಗಿ ನಡೆದುಕೊಳ್ಳಬೇಕು. ಇಲ್ಲವಾದರೆ ಅವರು ನಮ್ಮನ್ನು ಗೇಲಿ ಮಾಡಬಹುದು. ಇದರಿಂದ ನಮ್ಮ ಮರ್ಯಾದೆ ಹೋಗುತ್ತದೆ. ಹಾಗಾಗಿ ಇದನ್ನು ತಪ್ಪಿಸಲು ನೀವು ಈ ಸಲಹೆ ಪಾಲಿಸಿ.

ಸಂಬಂಧಿಕರು ಮನೆಗೆ ಬಂದಾಗ ಅವರ ಮುಂದೆ ದಂಪತಿಗಳು ಜಗಳವಾಡುವುದನ್ನು ತಪ್ಪಿಸಿ. ನಿಮ್ಮಲ್ಲಿ ಏನೇ ಸಮಸ್ಯೆ ಇದ್ದರೂ ಅದನ್ನು ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ. ಇಲ್ಲವಾದರೆ ಸಂಬಂಧಿಕರು ನಿಮ್ಮ ಜಗಳವನ್ನು ವಿಚಿತ್ರವಾಗಿ ನೋಡುತ್ತಾರೆ ಗೇಲಿ ಮಾಡುತ್ತಾರೆ.

ಸಂಬಂಧಿಕರ ಮುಂದೆ ನಿಮ್ಮ ಮಕ್ಕಳನ್ನು ಬೈಯಬೇಡಿ. ಮಕ್ಕಳು ಏನೇ ತಪ್ಪು ಮಾಡಿದರೂ ತಿಳಿಸಿ ಹೇಳಿ. ಇಲ್ಲವಾದರೆ ಎಲ್ಲರೂ ಹೋದ ಬಳಿಕ ಬೈಯಿರಿ. ಇಲ್ಲವಾದರೆ ಸಂಬಂಧಿಕರು ನಿಮ್ಮನ್ನು ಗೇಲಿ ಮಾಡಬಹುದು.

ಸಂಬಂಧಿಕರು ಮನೆಗೆ ಬಂದಾಗ ಅಡುಗೆಯ ಬಗ್ಗೆ ಚಿಂತಿಸಬೇಡಿ. ಅದನ್ನು ಅವರ ಮುಂದೆ ಹೇಳಬೇಡಿ. ಬದಲಾಗಿ ಅಡುಗೆ ಮಾಡಲು ಸಾಧ್ಯವಾಗದಿದ್ದರೆ ಹೊರಗಡೆಯಿಂದ ತರಿಸಿಕೊಳ್ಳಿ. ಹಾಗೇ ಸಂಬಂಧಿಕರಿಗೆ ಬೇಸರವಾಗದಂತೆ ನೋಡಿಕೊಳ್ಳಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...