Kannada Duniya

ನೀರಿನಲ್ಲಿ ಹೆರಿಗೆ ಎಷ್ಟು ಸುರಕ್ಷಿತ? ಇಲ್ಲಿದೆ ನೋಡಿ ಮಾಹಿತಿ!

ವಿದೇಶಗಳಲ್ಲಿ ನೀರಿನಲ್ಲಿ ಹೆರಿಗೆ ಮಾಡಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಭಾರತದಲ್ಲಿ ಅಷ್ಟಾಗಿ ಚಾಲ್ತಿಯಲ್ಲಿಲ್ಲದ ಈ ಕ್ರಮ ಹಲವು ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುತ್ತದೆ.ಅವು ಯಾವುದು ಎಂಬುದರ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.

ವಾಟರ್ ಬರ್ತ್ ಕಡಿಮೆ ಅಪಾಯದ ಗರ್ಭಿಣಿಯರಿಗೆ ಹೇಳಿ ಮಾಡಿಸಿದ್ದು. ಪ್ರಸೂತಿ ತಜ್ಞರ ಅನುಮತಿ ಇಲ್ಲದೆ, ಮೇಲ್ವಿಚಾರಣೆ ಇಲ್ಲದೆ ಈ ಹೆರಿಗೆ ಮಾಡಿಕೊಳ್ಳುವುದು ಅತ್ಯಂತ ಅಪಾಯಕಾರಿ ಸಂಗತಿ. ಅಧಿಕ ರಕ್ತದೊತ್ತಡ, ಮಧುಮೇಹ, ರಕ್ತಸ್ರಾವದಂತಹ ಸಮಸ್ಯೆ ಹೊಂದಿರುವವರು ನೀರಿನಲ್ಲಿ ಹೆರಿಗೆ ಮಾಡಿಸಿಕೊಳ್ಳುವುದು ಖಂಡಿತಾ  ಒಳ್ಳೆಯದಲ್ಲ.

ತುರ್ತು ಸಿಸೇರಿಯನ್ ವಿಭಾಗಗಳ ವೈದ್ಯಕೀಯ ಮಧ್ಯಸ್ಥಿಕೆಯೊಂದಿಗೆ ಇದನ್ನು ನಿರ್ವಹಿಸಬೇಕು. ಪ್ರಸೂತಿ ತಜ್ಞರು ಹಾಗೂ ವೃತ್ತಿಪರರ ತಂಡವು ನೀರಿನ ಜನನ ಸಮಯದಲ್ಲಿ ಹಾಜರಿರುವುದು ಕಡ್ಡಾಯ.

ಮಗು ತಾಯಿಯ ಯೋನಿಯಿಂದ ಹೊರಬಂದ ತಕ್ಷಣ ಅದನ್ನು ನೀರಿನಿಂದ ಮೇಲೆತ್ತುವ ಅವಶ್ಯಕತೆ ಇರುತ್ತದೆಯಾದ್ದರಿಂದ ತಜ್ಞರು ಜೊತೆಗಿರುವುದು ಕಡ್ಡಾಯ. ಹೀಗಿದ್ದೂ ಭಾರತದಲ್ಲಿ ಅಷ್ಟಾಗಿ ಚಾಲ್ತಿಯಲ್ಲಿಲ್ಲದ ಈ ಪ್ರಕಾರ ಈಗಷ್ಟೇ ಹೈಟೆಕ್ ಆಸ್ಪತ್ರೆಗಳಲ್ಲಿ ಕಾಲಿಡುತ್ತಿದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...