Kannada Duniya

30 ವರ್ಷದ ನಂತರ ತಾಯಿಯಾಗಲು ಬಯಸುವವರು ಈ ಸಲಹೆ ಪಾಲಿಸಿ

ತಾಯಿಯಾಗುವುದು ಎಲ್ಲಾ ಮಹಿಳೆಯರ ಕನಸಾಗಿದೆ. ಆದರೆ ಕೆಲವರು ಬಹಳ ತಡವಾಗಿ ಗರ್ಭ ಧರಿಸಲು ಬಯಸುತ್ತಾರೆ. ಆದರೆ 35 ವರ್ಷದ ನಂತರ ಗರ್ಭಧರಿಸುವುದರಿಂದ ಕೆಲವು ಸಮಸ್ಯೆಗಳು ಎದುರಾಗುತ್ತದೆಯಂತೆ. ಹಾಗಾಗಿ 30 ವರ್ಷದ ನಂತರ ತಾಯಿಯಾಗಲು ಬಯಸುವವರು ಈ ಸಲಹೆ ಪಾಲಿಸಿ.

ನೀವು ಈ ವಯಸ್ಸಿನಲ್ಲಿ ಗರ್ಭಧರಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ. ವೈದ್ಯರನ್ನು ಸಂಪರ್ಕಿಸಿ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಅದರ ಆಧಾರದ ಮೇಲೆ ನಿಮ್ಮ ದೇಹ ತಾಯಿಯಾಗಲು ಸಿದ್ದವಾಗಿದೆ ಎಂಬುದನ್ನು ತಿಳಿಯಬಹುದು. ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ತಪ್ಪಿಸಲು ಎಸ್ ಐಟಿ ಪರೀಕ್ಷೆಗೆ ಒಳಗಾಗುವುದು ಉತ್ತಮ.

ಈ ವಯಸ್ಸಿನಲ್ಲಿ ಗರ್ಭಧರಿಸಲು ದೇಹದ ಆರೋಗ್ಯವು ಬಹಳ ಮುಖ್ಯ. ಹಾಗಾಗಿ ಉತ್ತಮ ಆಹಾರ ಕ್ರಮಗಳನ್ನು ಪಾಲಿಸಿ. ತರಕಾರಿ, ಹಣ್ಣುಗಳು, ಧಾನ್ಯಗಳನ್ನು ಹೆಚ್ಚು ಸೇವಿಸಿ. ತೂಕ ಮತ್ತು ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಪ್ರತಿದಿನ ವ್ಯಾಯಾಮ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...