Kannada Duniya

ಸಂಬಂಧಗಳ ಉಳಿವಿಗೆ ಬಾಬಾ ರಾಮ್ ದೇವ್  ಹೇಳಿರುವ ಟಿಪ್ಸ್ ಏನು ಗೊತ್ತೇ?

ಬಾಬಾ ರಾಮ್ ದೇವ್ ಯೋಗದಲ್ಲಿ ಮಾತ್ರ ಪರಿಣತರಲ್ಲ, ಉತ್ತಮ ವಾಗ್ಮಿಯೂ ಹೌದು. ಸಂಬಂಧಗಳು ಸುದೀರ್ಘಕಾಲ ಗಟ್ಟಿಯಾಗಿ ಉಳಿಯಬೇಕಾದರೆ ಈ ಕೆಲವು ವಿಷಯಗಳು ಅತ್ಯಗತ್ಯ ಎಂದಿದ್ದಾರೆ. ಅವುಗಳು ಯಾವುವು?

ಮೊದಲಿಗೆ, ತಂದೆತಾಯಿಯ ಸಂಬಂಧ ಅಥವಾ ಅಮ್ಮ ಮಗಳ ಸಂಬಂಧ ಇಲ್ಲವೇ ಗುರು ಶಿಷ್ಯರ ಸಂಬಂಧವಿರಬಹುದು, ಅದು ಜೀವನಕ್ಕೆ ಮುಖ್ಯ, ಸಂಬಂಧಗಳ ಮೂಲಕವೇ ಜೀವನ ಹಾಗೂ ಜಗತ್ತು ಮುಂದುವರಿಯುತ್ತಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.

ಸಂಬಂಧದಲ್ಲಿ ಒಡಕು ಮೂಡಿದರೆ ಅದು ಜೀವನದಲ್ಲೇ ಒಡಕು ಮೂಡಿದಂತೆ ಎಂಬುದನ್ನು ತಿಳಿದುಕೊಳ್ಳಬೇಕು. ನೀವು ಒಂದಿಲ್ಲೊಂದು ಸಂಬಂಧಗಳ ಕಟ್ಟುಪಾಡಿಗೆ ಒಳಪಟ್ಟ ಕಾರಣಕ್ಕೆ ಇಷ್ಟೊಂದು ಸಂತೋಷದಿಂದ ಬದುಕುತ್ತಿದ್ದೀರಿ. ಇದುವೇ ನಿಮ್ಮ ಜೀವನದಲ್ಲಿ ಯಶಸ್ಸು ಹಾಗೂ ಸಮೃದ್ಧಿಯನ್ನು ತರುವಂತದ್ದು ಎಂಬುದನ್ನು ಮರೆಯಬಾರದು.

ಯಾವುದೇ ಸಂಬಂಧವಿರಲಿ ಅಲ್ಲಿ ಪ್ರೀತಿ, ಗೌರವ ಹಾಗೂ ಹೊಂದಾಣಿಕೆಯ ಗುಣ ಇಲ್ಲವಾದರೆ ಜೀವನ ಕಷ್ಟವಾಗುತ್ತದೆ. ಸಂಬಂಧಗಳಲ್ಲಿ ರಾಜಿ ಮಾಡಿಕೊಂಡಾಗ ಮಾತ್ರ ಕನಸಿನ ಬದುಕು ನಿಮ್ಮದಾಗುತ್ತದೆ ಎನ್ನುತ್ತಾರೆ ಬಾಬಾ ರಾಮ್ ದೇವ್.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...