Kannada Duniya

ಮಕ್ಕಳು ವೇಗವಾಗಿ ಎತ್ತರಕ್ಕೆ ಬೆಳೆಯುವಲ್ಲಿ ಪೋಷಕರ ಪಾತ್ರವು ದೊಡ್ಡದು…!

ಮಕ್ಕಳು ವೇಗವಾಗಿ ಎತ್ತರಕ್ಕೆ ಬೆಳೆಯಬೇಕು ಎಂದು ಪೋಷಕರು ಬಯಸುವುದು ಸಹಜ. ಸರಿಯಾದ ಪೋಷಣೆ ವ್ಯಾಯಾಮ ಹಾಗೂ ಆಹಾರ ಮಕ್ಕಳನ್ನು ಎತ್ತರಕ್ಕೆ ಬೆಳೆಸುತ್ತದೆ. ಅದು ಮಾತ್ರವಲ್ಲ, ಮಕ್ಕಳೊಂದಿಗಿನ ಭಾವನಾತ್ಮಕ ಸಂಬಂಧವೂ ಕೂಡ ಅವರ ಬೆಳವಣಿಗೆಯನ್ನು ನಿರ್ಧರಿಸುತ್ತದೆ.

ಮಕ್ಕಳ ಮಾನಸಿಕ ಆರೋಗ್ಯ ಅವರ ಬೆಳವಣಿಗೆ ಬಹಳ ಮುಖ್ಯ ಎಂಬುದನ್ನು ಇತ್ತೀಚಿನ ಸಂಶೋಧನೆಗಳು ದೃಢಪಡಿಸಿವೆ. ಆತ್ಮೀಯರಿಂದ ಪ್ರೀತಿ ಹಾಗೂ
ನಂಬಿಕೆ ಗಳಿಸಿಕೊಳ್ಳಲು ಮಕ್ಕಳು ಭವಿಷ್ಯದಲ್ಲಿ ಭಾವನಾತ್ಮಕ ಒತ್ತಡವನ್ನು ಬೆಳೆಸಿಕೊಳ್ಳುವುದು ಮಾತ್ರವಲ್ಲ ಇದು ನೇರವಾಗಿ ದೇಹದ ಮೇಲು ಪರಿಣಾಮ ಬೀರುತ್ತದೆ ಎಂಬುದನ್ನು ಈ ಸಂಶೋಧನೆಗಳು ದೃಢಪಡಿಸಿವೆ.

ಮಕ್ಕಳ ಹತ್ತಿರ ಜೆನೆಟಿಕ್ಸ್ ಮೇಲೆ ಆಧಾರವಾಗಿರುತ್ತದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ ಆದರೂ ಪರಿಸರ ಹಾಗೂ ಮಾನಸಿಕ ಅಂಶಗಳು ಕೂಡ ಇದರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಇವು ತಿಳಿಸಿವೆ.

ಮಕ್ಕಳು ಖುಷಿಯಾಗಿ ಸಂತೋಷದಿಂದ ಬೆಳೆಯುವ ವಾತಾವರಣ ಸೃಷ್ಟಿಸುವುದು ಬಹಳ ಮುಖ್ಯ. ಇದು ಮಕ್ಕಳೊಂದಿಗೆ ನಾನೇ ನಿಮ್ಮ ಬಾಂಧವ್ಯವನ್ನು ಬಲಪಡಿಸುತ್ತದೆ. ಮಕ್ಕಳಿಗೆ ಅತ್ಯಗತ್ಯವಾದ ಆಹಾರ ವಸತಿಯನ್ನು ಕಲ್ಪಿಸುವುದು ಮಾತ್ರವಲ್ಲ ಅವರ ಭಾವನೆಗಳನ್ನು ವ್ಯಕ್ತಪಡಿಸಲು ಸೂಕ್ತವಾಗುವ ವಾತಾವರಣವನ್ನು ಸೃಷ್ಟಿಸುವುದು ಕೂಡ ಹೆತ್ತವರ ಜವಾಬ್ದಾರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...