Kannada Duniya

40 ವರ್ಷದ ನಂತರ ನಿಮ್ಮ ಪ್ರೀತಿಯ ಜೀವನವನ್ನು ಉತ್ತಮವಾಗಿಸಲು ಈ ಸಲಹೆ ಪಾಲಿಸಿ….!

ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ಆದರೆ ಕೆಲವರು ಎಷ್ಟೇ ಪ್ರೀತಿಸಿ ಮದುವೆಯಾದರೂ ಕೂಡ ವಯಸ್ಸಾದಂತೆ ಅವರ ನಡುವೆ ಮೊದಲಿನಂತೆ ಪ್ರೀತಿ ಇರುವುದಿಲ್ಲ. ಹಾಗಾಗಿ 40 ವರ್ಷದ ನಂತರವೂ ನಿಮ್ಮ ಪ್ರೀತಿಯ ಜೀವನವನ್ನು ಉತ್ತಮವಾಗಿಸಲು ಈ ಸಲಹೆ ಪಾಲಿಸಿ.

ನಿಮಗೆ ಎಷ್ಟೇ ಕೆಲಸವಿದ್ದರೂ ಒಟ್ಟಿಗೆ ಸಮಯ ಕಳೆಯಿರಿ. ಸ್ವಲ್ಪ ಸಮಯ ಜೊತೆಯಲ್ಲಿ ಕುಳಿತು ನಿಮ್ಮ ಹಿಂದಿನ ಜೀವನದ ಬಗ್ಗೆ ಮಾತನಾಡಿ. ಇದರಿಂದ ನಿಮ್ಮ ನಡುವೆ ಪ್ರೀತಿ ಹೆಚ್ಚಾಗುತ್ತದೆ.

ಹಾಗೇ ಪ್ರತಿದಿನ ಜೊತೆಯಾಗಿ ವಾಕಿಂಗ್ ಗೆ ಹೋಗಿ. ಜೊತೆಯಲ್ಲಿ ಮಾತನಾಡುತ್ತಾ ವಾಕಿಂಗ್ ಮಾಡುವುದರಿಂದ ನಿಮ್ಮ ನಡುವೆ ಪ್ರೀತಿ, ಕಾಳಜಿ ಹೆಚ್ಚಾಗುತ್ತದೆ.

ಅಲ್ಲದೇ ನೀವು ವಾರದಲ್ಲಿ ಒಮ್ಮೆಯಾದರೂ ಅಥವಾ ರಜಾ ದಿನಗಳಲ್ಲಿ ಹೊರಗಡೆ ಸುತ್ತಾಡಿ, ಹೊರಗಡೆ ಜೊತೆಯಾಗಿ ಊಟ ಮಾಡಿ. ಇದರಿಂದ ನಿಮ್ಮ ಜೀವನ ಬೇಸರ ಎನಿಸುವುದಿಲ್ಲ.

ನೈಸರ್ಗಿಕವಾಗಿ ಮಕ್ಕಳ ಎತ್ತರ ಜಾಸ್ತಿ ಆಗಲು ಈ ಆಹಾರ ಕ್ರಮ ಅನುಸರಿಸಿ…!

ಹಾಗೇ 40 ವರ್ಷದ ನಂತರ ನಿಮ್ಮ ಸಂಬಂಧವನ್ನು , ಸಂಗಾತಿಯನ್ನು ನಿರ್ಲಕ್ಷ್ಯ ಮಾಡಬೇಡಿ. ಬೇರೆಯವರ ಜೊತೆ ಸಂಬಂಧ ಬೆಳೆಸಿಕೊಳ್ಳಬೇಡಿ. ಸಂಗಾತಿಗೆ ಮಾತು ಮಾತಿಗೆ ಅವಮಾನ ಮಾಡಬೇಡಿ. ಅವರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಪರಿಹಾರ ನೀಡಿ.ಇದರಿಂದ ನಿಮ್ಮ ಪ್ರೀತಿಯ ಜೀವನ ಯಾವಾಗಲೂ ಖುಷಿಯಿಂದ ಇರುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...