Kannada Duniya

ವಿಪರೀತ ಹಣ ಖರ್ಚು ಮಾಡುತ್ತಿದ್ದೀರಾ….? ಇದಕ್ಕೆ ಕಡಿವಾಣ ಹಾಕುವುದು ಹೇಗೆ…?

ಮನೆಯೆಂದ ಮೇಲೆ ಅಲ್ಲಿ ಖರ್ಚು –ವೆಚ್ಚಗಳು ಜಾಸ್ತಿ ಇರುತ್ತವೆ. ಅದನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು. ಇಲ್ಲದಿದ್ದರೆ ವಿಪರಿತ ಖರ್ಚು ವೆಚ್ಚದಿಂದ ಹಣಕಾಸಿನ ತೊಂದರೆಯುಂಟಾಗಿ ಸಂಸಾರ ನಿಭಾಯಿಸುವುದು ಕಷ್ಟವಾಗುತ್ತದೆ. ಹಾಗಾದ್ರೆ ಇದಕ್ಕೆ ಪರಿಹಾರವೇನು…?

ಹೊಳೆಗೆ ಹಾಕುವುದಾದರೂ ಲೆಕ್ಕ ಮಾಡಿ ಹಾಕು ಎನ್ನುತ್ತಾರೆ ಹಿರಿಯರು. ಹಾಗಾಗಿ ಯಾವುದಕ್ಕೆ ಖರ್ಚು ಮಾಡುತ್ತಿದ್ದೇವೆ ಎಂಬುದನ್ನು ಮೊದಲು ಯೋಚಿಸಬೇಕು. ಶಿಕ್ಷಣ, ಆಹಾರ, ಬಟ್ಟೆ ಇವು ಅಗತ್ಯವಾಗಿರುತ್ತದೆ. ಹಾಗಾಗಿ ಇವುಗಳಿಗೆ ಖರ್ಚು ಮಾಡುವಾಗ ತೀರಾ ಜಿಪುಣತನ ಮಾಡಬೇಡಿ. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ಇದಕ್ಕೂ ಖರ್ಚು ಮಾಡಿದರೆ ದುಂದುವೆಚ್ಚವಾಗುತ್ತದೆ.

ಇನ್ನು ಮಕ್ಕಳಿಗೆ ಬೇಕಾದ ಆಟಿಕೆ, ಕೆಲವೊಂದು ಆನ್ ಲೈನ್ ಆರ್ಡರ್ ಗಳು ಅಗತ್ಯವಿದೆಯಾ ಎಂದು ಯೋಚಿಸಿ ಖರ್ಚು ಮಾಡಿ.
ನೋಡಿದ್ದನ್ನೆಲ್ಲಾ ಕೊಳ್ಳುವ ಚಪಲ ಇಟ್ಟುಕೊಳ್ಳಬೇಡಿ. ಇದರಿಂದ ಹಣವೂ ನೀರಿನಂತೆ ಪೋಲಾಗುತ್ತದೆ. ಆ ವಸ್ತು ಇಲ್ಲದಿದ್ದರೆ ಬೇರೆ ಯಾವುದರಿಂದ ಅದನ್ನು ಸರಿಹೊಂದಿಸಬಹುದು ಎಂಬುದನ್ನು ಯೋಚಿಸಿ. ತೀರಾ ಅನಿವಾರ್ಯವಾಗಿದ್ದರೆ ಮಾತ್ರ ತೆಗೆದುಕೊಳ್ಳಿ.

ಹಣ್ಣು ಮತ್ತು ಹಣ್ಣಿನ ರಸದಲ್ಲಿ ಯಾವುದು ದೇಹದ ತೂಕ ಇಳಿಸಲು ಸಹಕಾರಿ….?

ಇನ್ನು ಖರ್ಚಿನ ಪಟ್ಟಿ ಮಾಡುವಾಗ ಮನೆಯವರೆಲ್ಲರೂ ಒಟ್ಟು ಸೇರಿ ಮಾಡಿ.ತಿಂಗಳಿಗೊಮ್ಮೆ ಮಾಡಿದ ಖರ್ಚನ್ನು ಪರಿಶೀಲಿಸಿ. ಮಕ್ಕಳನ್ನೂ ನಿಮ್ಮ ಜೊತೆ ಕುರಿಸಿಕೊಳ್ಳಿ. ಆಗ ಅವರಿಗೆ ದುಡ್ಡಿನ ಬೆಲೆ ಗೊತ್ತಾಗುತ್ತದೆ. ಖರ್ಚಿನ ಪಟ್ಟಿ ಮಾಡಿಕೊಳ್ಳುವುದರಿಂದ ಎಲ್ಲಿ ದುಡ್ಡು ಜಾಸ್ತಿ ಖರ್ಚಾಗುತ್ತಿದೆ ಎಂಬುದರ ಬಗ್ಗೆ ಗೊತ್ತಾಗುತ್ತದೆ.

ಉಳಿತಾಯಕ್ಕಿಂತ ಜಾಸ್ತಿ ಖರ್ಚು ಆದರೆ ಹಣದ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ ನೀವು ದುಡಿಯುವ ಪ್ರತಿ ಪೈಸೆಗೂ ಬೆಲೆ ನೀಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...