Kannada Duniya

ರಜೆಯ ಸಮಯದಲ್ಲಿ ಮಕ್ಕಳು ಟಿವಿ, ಮೊಬೈಲ್ ನೋಡುವುದನ್ನು ಕಡಿಮೆ ಮಾಡಲು ಈ ತಂತ್ರ ಬಳಸಿ

ಮಕ್ಕಳು ರಜಾ ದಿನಗಳಲ್ಲಿ ಮನೆಯಿರುವಾಗ ಹೆಚ್ಚು ಟಿವಿ, ಮೊಬೈಲ್ ಅನ್ನು ಹೆಚ್ಚು ನೋಡುತ್ತಿರುತ್ತಾರೆ. ಇದು ಅವರ ಕಣ್ಣಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಕ್ಕಳು ಅತಿಯಾಗಿ ಟಿವಿ ,ಮೊಬೈಲ್ ನೋಡುವುದನ್ನು ಕಡಿಮೆ ಮಾಡಲು ರಜಾ ದಿನಗಳಲ್ಲಿ ಈ ಕೆಲಸ ಮಾಡಿಸಿ.

ಮಕ್ಕಳಿಗೆ ರಜಾ ದಿನಗಳಲ್ಲಿ ತರಕಾರಿಗಳ ಸಿಪ್ಪೆ ತೆಗೆಯುವುದು, ಅದನ್ನು ಕತ್ತರಿಸುವುದನ್ನು ಕಲಿಸಿ. ಇದರಿಂದ ಅವರಿಗೂ ಸಮಯ ಕಳೆಯುತ್ತದೆ ಮತ್ತು ನಿಮಗೂ ಸಹಾಯ ಮಾಡುತ್ತದೆ.

ಪುಸ್ತಕದಲ್ಲಿ ಚಿತ್ರ ಬಿಡಿಸಲು ಅಥವಾ ಚಿತ್ರಗಳನ್ನು ಅಂಟಿಸಲು ಹೇಳಿ. ಇದು ಅವರಲ್ಲಿ ಆಸಕ್ತಿಯನ್ನು ಮೂಡಿಸುತ್ತದೆ.

ರಜಾ ದಿನಗಳಲ್ಲಿ ಮಕ್ಕಳಿಗೆ ಹಗ್ಗ ಜಪಿಂಗ್ ಮಾಡುವುದನ್ನು ಕಲಿಸಿ. ಇದರಿಂದ ಅವರ ದೇಹಕ್ಕೆ ವ್ಯಾಯಾಮ ಸಿಗುತ್ತದೆ. ಇದು ದೇಹವನ್ನು ಫಿಟ್ ಆಗಿಸುತ್ತದೆ.

ಅಲ್ಲದೇ ಮಕ್ಕಳಿಗೆ ಮಡಿಕೆಗಳಿಗೆ ಬಣ್ಣವನ್ನು ಹಚ್ಚಿ ಅದರಲ್ಲಿ ಹೂದಾನಿಯನ್ನು ಮಾಡುವಂತೆ ಸಲಹೆ ನೀಡಿ. ಅಥವಾ ಹೂವಿನ ಗಿಡಗಳನ್ನು ನೆಡುವಂತೆ ಸಲಹೆ ನೀಡಿ. ಇದು ಅವರಿಗೆ ಖುಷಿಯನ್ನು ನೀಡುತ್ತದೆ.

ರಜಾ ದಿನಗಳಲ್ಲಿ ಮಕ್ಕಳ ಜೊತೆ ಲೂಡೋ, ಕೇರಂ, ಚೆಸ್ ಮುಂತಾದ ಆಟಗಳನ್ನು ಆಡಿ. ಇದರಿಂದ ಅವರಿಗೆ ಟಿವಿ, ಮೊಬೈಲ್ ನೋಡುವ ಬಯಕೆಯಾಗುವುದಿಲ್ಲ.

ಅಲ್ಲದೇ ಮಕ್ಕಳಿಗೆ ಕಥೆಗಳನ್ನು, ಬರೆಯಲು ಹೇಳಿ, ಆಡಿಯೋ ಕಥೆಗಳನ್ನು ಕೇಳಿಸಿ. ಇದರಿಂದ ಅವರ ಆಸಕ್ತಿ ಹೆಚ್ಚಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...