Kannada Duniya

ತುಂಬಾ ಅನುಮಾನ ಪಡುತ್ತಿದ್ದೀರಾ….? ಹಾಗಾದ್ರೆ ಇದನ್ನು ತಪ್ಪದೇ ಓದಿ…!

ಅನುಮಾನಕ್ಕಿಂತ ದೊಡ್ಡ ರೋಗವಿಲ್ಲ ಎಂದು ಹಿರಿಯರು ಹೇಳಿರುವುದನ್ನು ಕೇಳಿರುತ್ತೇವೆ. ಹೌದು ಇದೊಂದು ದೊಡ್ಡ ರೋಗ. ಅನುಮಾನಾ ಹೆಚ್ಚಾದಷ್ಟೂ ಮನಸ್ಸಿನ ನೆಮ್ಮದಿ ಕಡಿಮೆಯಾಗುತ್ತಾ ಹೋಗುತ್ತದೆ. ಕೆಲವೊಮ್ಮೆ ಅಗತ್ಯವಿಲ್ಲದಕ್ಕೂ ಅನುಮಾನ ಪಟ್ಟು ಸಂಬಂಧಗಳನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪುತ್ತೇವೆ. ಈ ಅನುಮಾನಗಳಿಗೆ ಕೆಲವೊಮ್ಮೆ ನಮ್ಮ ಮನಸ್ಸೇ ಕಾರಣವಾಗಿರುತ್ತದೆ. ಇದನ್ನು ಸರಿಪಡಿಸಿಕೊಳ್ಳುವುದು ಹೇಗೆ?

ದೇಹದಲ್ಲಿ ಚಿಕ್ಕ ನೋವಿದ್ದರೂ ಈ ನೋವು ಯಾಕೆ ಬಂತು..? ಈ ನೋವಿನಿಂದ ಏನಾದರೂ ಆಗುತ್ತಾ…? ನನಗೆ ಆ ಕಾಯಿಲೆ ಬಂದಿರಬಹುದಾ ಎಂಬಿತ್ಯಾದಿ ತಲೆಯಲ್ಲಿ ಓಡಾಡುವುದಕ್ಕೆ ಶುರುವಾಗುತ್ತದೆ. ಇದರಿಂದ ನಮ್ಮ ಮನಸ್ಥಿತಿಯನ್ನು ಹಾಳು ಮಾಡಿಕೊಂಡು ಇಲ್ಲದ ರೋಗಗಳಿಗೆ ನಾವೇ ಆಹ್ವಾನ ಕೊಟ್ಟ ಹಾಗೇ ಆಗುತ್ತದೆ.ಇದರ ಬದಲು ಇದ್ದ ಬದುಕನ್ನ ಪ್ರೀತಿಸಿ. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ಸಿಕ್ಕಿದ್ದನ್ನೆಲ್ಲಾ ತಿಂದು ದೇಹಾರೋಗ್ಯ ಹಾಳುಮಾಡಿಕೊಂಡು ಪರಿತಪಿಸುವ ಬದಲು ಆದಷ್ಟೂ ಆರೋಗ್ಯಕರವಾದ ಡಯೆಟ್ ಫಾಲೋ ಮಾಡಿ.

ಚರ್ಮದ ಸಮಸ್ಯೆ ಇರುವವರು ಈ ಆಹಾರವನ್ನು ಸೇವಿಸಬೇಡಿ….!

ಇನ್ನು ಸಂಬಂಧಗಳಲ್ಲಿ ಅನುಮಾನ ಪಟ್ಟರೆ ಬದುಕೇ ನರಕದ ಹಾಗೇ ಆಗುತ್ತದೆ. ಗಂಡ, ಹೆಂಡತಿಯ ಮೇಲೆ, ಹೆಂಡತಿ ಗಂಡನ ಮೇಲೆ ಅನುಮಾನ ಪಟ್ಟರೆ ಆ ಮನೆಯಲ್ಲಿ ಸುಖ ಶಾಂತಿ ಎಂಬುದು ಕನಸಿನ ಮಾತಾಗುತ್ತದೆ. ಏನೇ ಅನುಮಾನವಿದ್ದರೂ ನೀವಿಬ್ಬರೂ ಕುಳಿತು ಚರ್ಚಿಸಿ ಅಗ ಎಲ್ಲಿ ತಪ್ಪಾಯಿತು ಎಂಬುದು ಗೊತ್ತಾಗುತ್ತದೆ. ಇದರಿಂದ ಸಂಬಂಧವೂ ಉಳಿಯುತ್ತದೆ. ನಿಮ್ಮ ನೆಮ್ಮದಿಯೂ ಹಾಳಾಗುವುದಿಲ್ಲ.

ಇರುವ ಒಂದು ಜೀವನವನ್ನು ಯಾವುದ್ಯಾವುದೋ ಯೋಚನೆ, ಅನುಮಾನಗಳಿಂದ ಕಳೆಯುವ ಬದಲು ಖುಷಿಯಿಂದ ಬದುಕಿ ಬಿಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...