Kannada Duniya

ಒತ್ತಡ ನಿವಾರಣೆಯ ಸೂತ್ರ ನಿಮ್ಮಲ್ಲೇ ಇದೆ….!

ಅತಿಯಾದ ಒತ್ತಡ ವ್ಯಕ್ತಿಯನ್ನು ಅಸ್ವಸ್ಥತೆಗೆ ದೂಡುತ್ತದೆ. ಇದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಇದು ವಿಪರೀತಕ್ಕೆ ಹೋದಾಗ ಮಾತ್ರ ಮನ ಶಾಸ್ತ್ರಜ್ಞರ ನೆರವು ಬೇಕು. ಇಲ್ಲವಾದಲ್ಲಿ ಈ ಸಮಸ್ಯೆಗೆ ನೀವೇ ಪರಿಹಾರ ಕಂಡುಕೊಳ್ಳಬಹುದು.

ಒತ್ತಡ ನಿವಾರಣೆಗೆ ಮೊದಲು ನೀವು ಮಾಡಬೇಕಾದಿಷ್ಟೇ. ದಿನವಿಡೀ ಕೆಲಸ ಮಾಡಿ ಸುಸ್ತಾಗ ನಿಮ್ಮ ದೇಹ ಹಾಗೂ ಮನಸ್ಸಿಗೆ ಕನಿಷ್ಠ ಏಳರಿಂದ ಎಂಟು ಗಂಟೆಯ ನಿದ್ರೆ ಬೇಕೇ ಬೇಕು. ಇದು ದೊರೆಯದೆ ಹೋದಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕೆಡುತ್ತ ಬರುತ್ತದೆ. ಹಾಗಾಗಿ ಮೊದಲು ಒತ್ತಡ ನಿವಾರಣೆಯತ್ತ ಗಮನಕೊಡಿ.

ನಿಮ್ಮ ಆತ್ಮೀಯರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ. ಅದು ಶಾಲೆ, ಕಾಲೇಜು, ಕಚೇರಿ ಅಥವಾ ಮನೆ ಯಾವುದೇ ಇರಲಿ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಆತ್ಮೀಯವಾಗಿರಿ. ಅವರು ನೀಡುವ ಸಲಹೆಗಳನ್ನು ಪಾಲನೆ ಮಾಡುವುದು ಕಡ್ಡಾಯವಲ್ಲದಿದ್ದರೂ ನಿಮ್ಮ ಉತ್ತಡ ನಿವಾರಣೆಗೆ ಇದು ಬಹಳ ಮುಖ್ಯ.

ಕೆಮ್ಮು ಮತ್ತು ನೆಗಡಿಯಾದ ತಕ್ಷಣ ಈ ವಿಶೇಷ ಕಷಾಯವನ್ನು ಮಾಡಿ, ಶೀತ ಗುಣವಾಗುತ್ತದೆ….!

ಸಮಯ ಸಿಕ್ಕಾಗ ಹೊಸದನ್ನು ಕಲಿಯಿರಿ ಅಥವಾ ಉತ್ತಮ ಹವ್ಯಾಸ ಬೆಳೆಸಿಕೊಳ್ಳಿ. ನಿಮಗೆ ಆಸಕ್ತಿ ಇರುವ ವಿಷಯದಲ್ಲಿ ತೊಡಗಿಕೊಳ್ಳಿ. ಈಗ ಯೂಟ್ಯೂಬ್ ನಲ್ಲಿ ಪ್ರತಿಯೊಂದು ಸುಲಭದಲ್ಲಿ ದಕ್ಕುವುದರಿಂದ ಕಲಿಕೆ ಸುಲಭವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...