Kannada Duniya

ಪಿತೃದೋಷ ನಿವಾರಣೆಗೆ ಶ್ರಾವಣ ಅಮಾವಾಸ್ಯೆ (ಹರಿಯಲಿ ಅಮಾವಾಸ್ಯೆ) ಯಂದು ಈ ಕ್ರಮಗಳನ್ನು ಅನುಸರಿಸಿ

ಸನಾತನ ಧರ್ಮದಲ್ಲಿ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಅದರಲ್ಲೂ ಶ್ರಾವಣ ಅಮಾವಾಸ್ಯೆ ವಿಶೇಷ ಮಹತ್ವವನ್ನು ಹೊಂದಿದೆ.

 

ಇದನ್ನು ಹರಿಯಲಿ ಅಮಾವಾಸ್ಯೆ ಎಂದು ಕೂಡ ಕರೆಯುತ್ತಾರೆ. ಇದು ಆಗಸ್ಟ್ 8 ರಂದು ಬರಲಿದೆ.

 

ಅಮಾವಾಸ್ಯೆಯಂದು ಪೂರ್ಜರಿಗೆ ತರ್ಪಣ ಸಮರ್ಪಿಸಲಾಗುತ್ತದೆ. ಇದರಿಂದ ನಿಮ್ಮ ಪಿತೃಗಳಿಗೆ ತೃಪ್ತಿ ಸಿಗುತ್ತದೆ. ಹಾಗಾಗಿ ಶ್ರಾವಣ ಅಮವಾಸ್ಯೆ (ಹರಿಯಲಿ ಅಮಾವಾಸ್ಯೆ) ಯಂದು ಪಿತೃದೋಷ ನಿವಾರಣೆಯಾಗಲು ಏನು ಮಾಡಬೇಕೆಂಬುದನ್ನು ತಿಳಿದುಕೊಳ್ಳಿ.

 

ಶ್ರಾವಣ ಅಮಾವಾಸ್ಯೆ (ಹರಿಯಲಿ ಅಮಾವಾಸ್ಯೆ) ಯಂದು ಮರ ನೆಡುವ ಮೂಲಕ ಪಿತೃದೋಷವನ್ನು ಪರಿಹರಿಸಿಕೊಳ್ಳಬಹುದು. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗಾಗಿ ಅರಳಿಮರ, ಆಲದ ಮರ, ಬೇವಿನ ಮರ, ಬಿಲ್ವಪತ್ರೆ ಮರ, ನೆಲ್ಲಿಕಾಯಿ ಮರ ಮುಂತಾದವುಗಳ ಗಿಡಗಳನ್ನು ನೆಡಬೇಕು.

 

ಈ ಅಮಾವಾಸ್ಯೆಯಂದು ಶಿವನ ಆರಾಧನೆ ಫಲಪ್ರದವಾಗಲಿದೆ. ಹಾಗಾಗಿ ಶಿವನಿಗೆ ಬಿಳಿ ಹೂವುಗಳನ್ನು ಅರ್ಪಿಸುವುದರಿಂದ ಪಿತೃದೋಷ ಕೊನೆಗೊಳ್ಳುತ್ತದೆ.
ಹರಿಯಲಿ ಅಮಾವಾಸ್ಯೆಯಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡಬೇಕು. ಪೂರ್ವಜರಿಗೆ ತರ್ಪಣ ಬಿಡಬೇಕು. ಇದರಿಂದ ಪೂರ್ವಜರ ಆತ್ಮಗಳಿಗೆ ಶಾಂತಿ ಸಿಗುತ್ತದೆ. ಪಿತೃದೋಷ ನಿವಾರಣೆಯಾಗುತ್ತದೆ.

 

ಶ್ರಾವಣ ಮಾಸದಲ್ಲಿ ಮದುವೆಗೆ ಎದುರಾಗುವ ಅಡೆತಡೆಗಳನ್ನು ದೂರಮಾಡಲು ಈ ಕ್ರಮಗಳನ್ನು ಅನುಸರಿಸಿ

 

ಅಮಾವಾಸ್ಯೆಯ ಸಂಜೆ ಅರಳೀಮರದ ಬಳಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ, ಮರಕ್ಕೆ ಪ್ರದಕ್ಷಿಣೆ ಹಾಕಿ. ಇದನ್ನು ಮಾಡುವುದರಿಂದ ಪಿತೃದೋಷದಿಂದ ಸ್ವಾತಂತ್ರ್ಯ ಸಿಗುತ್ತದೆ.
ಹರಿಯಲಿ ಅಮಾವಾಸ್ಯೆಯ ದಿನ ಪೂರ್ವಜರಿಗೆ ಉಪವಾಸ ಮಾಡುವ ಮೂಲಕ ಮತ್ತು ಬಡ ಬ್ರಾಹ್ಮಣರಿಗೆ ಆಹಾರವನ್ನು ನೀಡುವುದರಿಂದ ಪೂರ್ವಜರ ಆತ್ಮಗಳು ತೃಪ್ತಿ ಪಡೆಯುತ್ತದೆ.

 

Do these on Shravan Hariyali Amavas to get rid of pitru dosha

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...