Kannada Duniya

ಹೋಳಿ ಹಬ್ಬದ ದಿನ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ

ಹಿಂದೂಧರ್ಮದಲ್ಲಿ ಹೋಳಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಇದು ಬಣ್ಣಗಳ ಹಬ್ಬ, ಹಾಗಾಗಿ ಜನರು ಬಣ್ಣಗಳನ್ನು ಒಬ್ಬರ ಮೇಲೆ ಒಬ್ಬರು ಎರಚುತ್ತಾ ಹಬ್ಬವನ್ನು ಆಚರಿಸುತ್ತಾರೆ. ಈ ವರ್ಷ ಮಾರ್ಚ್ 25ರಂದು ಹೋಳಿ ಹಬ್ಬ ಬಂದಿದೆ. ಈ ದಿನ ನೀವು ಅಪ್ಪಿತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ.

ಹೋಳಿ ಹಬ್ಬದ ದಿನ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಬೇಡಿ. ಇದರಿಂದ ಜಾತಕದಲ್ಲಿ ಶುಕ್ರ ಬಲಹೀನನಾಗುತ್ತಾನೆ. ಅಲ್ಲದೇ ಬಿಳಿ ವಸ್ತುಗಳನ್ನು ದಾನ ಮಾಡುವುದಿಂದ ಚಂದ್ರ ದೋಷ ಉಂಟಾಗುತ್ತದೆ.

ಹೋಳಿ ಹಬ್ಬದ ದಿನ ವಿವಾಹಿತ ಮಹಿಳೆಯರು ಸಿಂಧೂರ, ಬಿಂದಿಗೆ, ಬಳೆ, ಇತ್ಯಾದಿಗಳನ್ನು ದಾನ ಮಾಡಬೇಡಿ. ಇದು ನಿಮ್ಮ ಜೀವನದ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ. ಅಲ್ಲದೇ ಈ ದಿನ ಕಬ್ಬಿಣ, ಸ್ಟೀಲ್ ಪಾತ್ರೆಗಳನ್ನು ದಾನ ಮಾಡಬೇಡಿ. ಇದರಿಂದ ನಿಮಗೆ ಕೆಟ್ಟ ಫಲಗಳು ದೊರೆಯುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...