Kannada Duniya

ಹೋಳಿ ಆಡಿ ಚರ್ಮದಲ್ಲಿ ಅಂಟಿಕೊಂಡ ಬಣ್ಣವನ್ನು ತೆಗೆಯಲು ಈ ಸಲಹೆ ಪಾಲಿಸಿ

ಹೋಳಿ ಹಬ್ಬ ಬಣ್ಣಗಳ ಹಬ್ಬ. ಹಾಗಾಗಿ ಎಲ್ಲರೂ ಬಣ್ಣಗಳನ್ನು ಮೈಮೇಲೆ ಎರಚುತ್ತಾ ಆಡುವುದು ಈ ಹಬ್ಬದ ವೈಶಿಷ್ಟ್ಯ ಆಗಿದೆ. ಹಾಗಾಗಿ ಬಣ್ಣಗಳು ಚರ್ಮದ ಮೇಲೆ ಅಂಟಿಕೊಳ್ಳುತ್ತದೆ. ಇದು ಚರ್ಮಕ್ಕೆ ಹಾನಿಯುಂಟುಮಾಡಬಹುದು. ಹಾಗಾಗಿ ಈ ಬಣ್ಣಗಳನ್ನು ನಿವಾರಿಸಲು ಈ ಸಲಹೆ ಪಾಲಿಸಿ.

ನಿಮ್ಮ ಚರ್ಮಕ್ಕೆ ಬಣ್ಣ ಅಂಟಿಕೊಳ್ಳಬಾರದಂತಿದ್ದರೆ ಹೋಳಿ ಆಡುವ ಮುನ್ನ ಚರ್ಮಕ್ಕೆ ಎಣ್ಣೆ ಮಸಾಜ್ ಮಾಡಿ. ಇದರಿಂದ ಬಣ್ಣ ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ. ಹಾಗೇ ಚರ್ಮಕ್ಕೆ ಬಣ್ಣ ಅಂಟಿದ್ದರೆ ಅದನ್ನು ಉಜ್ಜುವ ಮೂಲಕ ನಿವಾರಿಸಲು ಪ್ರಯತ್ನಿಸಬೇಡಿ. ಇದರಿಂದ ಚರ್ಮಕ್ಕೆ ಹಾನಿಯಾಗುತ್ತದೆ.

ಹಾಗಾಗಿ ಚರ್ಮದಲ್ಲಿರುವ ಬಣ್ಣವನ್ನು ನಿವಾರಿಸಲು ಸಾಸಿವೆ ಎಣ್ಣೆ ಹಚ್ಚಿ ಮಸಾಜ್ ಮಾಡಿ. ಹಾಗೇ ಕಡಲೆ ಹಿಟ್ಟು, ಹಾಲು ಮತ್ತು ನಿಂಬೆರಸವನ್ನು ಸೇರಿಸಿ ಪೇಸ್ಟ್ ತಯಾರಿಸಿ ಅದನ್ನು ಚರ್ಮಕ್ಕೆ ಹಚ್ಚಿ ಮಸಾಜ್ ಮಾಡಿ. ನಂತರ ಸ್ನಾನವಾದ ಬಳಿಕ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...