Kannada Duniya

ಹೋಳಿ ಆಡುವ ಮುನ್ನ ನಿಮ್ಮ ಕೂದಲಿನ ರಕ್ಷಣೆ ಹೀಗೆ ಮಾಡಿ

ಮಾರ್ಚ್ 25ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಬಣ್ಣಗಳ ಹಬ್ಬವಾದ್ದರಿಂದ ಈ ದಿನ ಜನರು ಬಣ್ಣಗಳನ್ನು ಒಬ್ಬರ ಮೇಲೆ ಒಬ್ಬರು ಎರಚಿಕೊಂಡು ಸಂಭ್ರಮಿಸುತ್ತಾರೆ. ಈ ಸಂದರ್ಭದಲ್ಲಿ ಈ ಬಣ್ಣಗಳು ಕೂದಲನ್ನು ಹಾನಿ ಮಾಡಬಹುದು. ಹಾಗಾಗಿ ಕೂದಲಿನ ರಕ್ಷಣೆ ಹೀಗೆ ಮಾಡಿಕೊಳ್ಳಿ.

ಹೋಳಿ ಬಣ್ಣಗಳು ಕೂದಲಿಗೆ ಆಂಟಿಕೊಳ್ಳುತ್ತದೆ. ಇದನ್ನು ಎಷ್ಟು ತೊಳೆದರೂ ಹೋಗುವುದಿಲ್ಲ. ಹಾಗಾಗಿ ಹೋಲಿ ಆಡುವ ಮುನ್ನ ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ. ಇದು ಕೂದಲನ್ನು ರಾಸಾಯನಿಕಗಳಿಂದ ರಕ್ಷಿಸುತ್ತದೆ ಮತ್ತು ತೊಳೆದಾಗ ಬೇಗನೆ ಹೋಗುತ್ತದೆ.

ಹಾಗೇ ಕೂದಲಿಗೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿ. ಇದು ಕೂದಲಿಗೆ ಬಣ್ಣ ಅಂಟಿಕೊಳ್ಳುವುದನ್ನು ತಡೆಯುತ್ತದೆ. ಮತ್ತು ಹೋಳಿ ಮುಗಿದ ನಂತರ ಕೂದಲನ್ನು ಒಮ್ಮೆ ಬಾಚಿಕೊಳ್ಳಿ. ಇದು ಹೆಚ್ಚುವರಿ ಬಣ್ಣಗಳನ್ನು ನಿವಾರಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...