Kannada Duniya

ಮಹಾಶಿವರಾತ್ರಿಯ ದಿನ ಶಿವನಿಗೆ ಈ ವಸ್ತುಗಳನ್ನು ಅರ್ಪಿಸಬೇಡಿ….!

ಹಿಂದೂಧರ್ಮದಲ್ಲಿ ಮಹಾಶಿವರಾತ್ರಿಯನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನ ಶಿವನನ್ನು ಪೂಜೆ ಮಾಡಿದರೆ ನಿಮಗಿರುವ ಸಮಸ್ಯೆಗಳು ದೂರವಾಗುತ್ತದೆಯಂತೆ. ಹಾಗಾಗಿ ಶಿವನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಿ ಪೂಜೆ ಮಾಡಿ. ಆದರೆ ಈ ಶಿವನಿಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಅರ್ಪಿಸಬೇಡಿ.

ಅರಿಶಿನ, ಕುಂಕುಮ : ಶಿವನಿಗೆ , ಕುಂಕುಮವನ್ನು ಅರ್ಪಿಸಬಾರದು. ಯಾಕೆಂದರೆ ಇದು ಮಹಿಳೆಯರಿಗೆ ಸಂಬಂಧಿಸಿದ ಕಾರಣ ಇದರಿಂದ ಶಿವ ಕೋಪಗೊಳ್ಳಬಹುದು. ಹಾಗಾಗಿ ಶಿವನಿಗೆ ಶ್ರೀಗಂಧದ ತಿಲಕವನ್ನು ಅರ್ಪಿಸಿ.

ಶಂಖ : ಶಿವನಿಗೆ ಯಾವುದೇ ಕಾರಣಕ್ಕೂ ಶಂಖದಿಂದ ಪೂಜೆ ಮಾಡಬೇಡಿ. ಯಾಕೆಂದರೆ ಶಂಖ ಶಂಖಚೂಡ ಎಂಬ ರಾಕ್ಷಸನ ಮೂಳೆಯಿಂದ ತಯಾರಿಸಲಾಗಿದೆಯಂತೆ. ಈ ಶಂಖಚೂಡನನ್ನು ಶಿವನು ಸಂಹರಿಸಿದ ಕಾರಣ ಇದನ್ನು ಶಿವನಿಗೆ ಅರ್ಪಿಸಬೇಡಿ.

ತುಳಸಿ ಎಲೆಗಳು : ಶಿವನಿಗೆ ತುಳಸಿ ಎಲೆಗಳನ್ನು ಅರ್ಪಿಸಬೇಡಿ. ಯಾಕೆಂದರೆ ಶಿವ ತುಳಸಿಯ ಪತಿ ಜಲಾಂಧರನ್ನು ಕೊಂದ ಕಾರಣ ತುಳಸಿ ಶಿವನನ್ನು ಬಹಿಷ್ಕರಿಸಿದ್ದಳು ಎನ್ನಲಾಗುತ್ತದೆ.

Shivaratri puja: ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ ಈ ನಿಯಮ ಪಾಲಿಸಿದರೆ ಒಳ್ಳೆಯದಾಗುತ್ತದೆ…!

ಕೇತಕಿ : ಕೇತಕಿ ಹೂ ಶಿವನಿಗೆ ಅರ್ಪಿಸಬಾರದಂತೆ. ಇದರಿಂದ ನಿಮಗೆ ಅಮಂಗಳಕರವಾಗಲಿದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...