Kannada Duniya

ಪೂಜೆಯಲ್ಲಿ ಈ 3 ಬಣ್ಣದ ಹೂಗಳನ್ನು ಬಳಸಿದರೆ ಉತ್ತಮ ಫಲ ದೊರೆಯುತ್ತದೆಯಂತೆ

ದೇವರ ಪೂಜೆಗೆ ಹೂಗಳನ್ನು ಬಳಸುತ್ತಾರೆ. ಹೂಗಳಿಲ್ಲದೇ ಯಾವ ದೇವರ ಪೂಜೆಯು ಮನಸ್ಸಿಗೆ ತೃಪ್ತಿ ನೀಡುವುದಿಲ್ಲ. ಅಂದಮಾತ್ರಕ್ಕೆ ಬೇರೆ ಬೇರೆ ಬಣ್ಣದ ಹೂಗಳನ್ನು ದೇವರ ಪೂಜೆಗೆ ಬಳಸಬಾರದು. ಪೂಜೆಗೆ ಈ 3 ಬಣ್ಣದ ಹೂಗಳನ್ನು ಬಳಸಿದರೆ ತುಂಬಾ ಒಳ್ಳೆಯದಂತೆ.

ಜ್ಯೋತಿಷ್ಯಶಾಸ್ತ್ರದಲ್ಲಿ ಕೆಂಪು ಶುಭ, ಧೈರ್ಯ ಮತ್ತು ಅದೃಷ್ಟದ ಸಂಕೇತ. ಹಾಗಾಗಿ ದೇವರಿಗೆ ಕೆಂಪು ಬಣ್ಣದ ತಿಲಕವನ್ನು ಇಡುತ್ತಾರೆ. ಅಲ್ಲದೇ ದುರ್ಗಾದೇವಿಯ ಮೆಚ್ಚಿದ ಬಣ್ಣ ಕೂಡ ಕೆಂಪಾಗಿದೆ. ಹಾಗಾಗಿ ಈ ಬಣ್ಣದ ಹೂಗಳನ್ನು ಪೂಜೆಗೆ ಬಳಸಿದರೆ ಒಳ್ಳೆಯದಂತೆ.

ಹಿಂದೂಧರ್ಮದಲ್ಲಿ ಹಳದಿ ಬಣ್ಣಕ್ಕೆ ವಿಶೇಷವಾದ ಮಹತ್ವವಿದೆ. ಹಾಗಾಗಿ ಶುಭ ಕಾರ್ಯಗಳಲ್ಲಿ ಹಳದಿ ಬಣ್ಣವನ್ನು ಹೆಚ್ಚು ಬಳಸುತ್ತಾರೆ. ಹಾಗಾಗಿ ದೇವರ ಪೂಜೆಗೆ ಹಳದಿ ಬಣ್ಣದ ಹೂಗಳನ್ನು ಬಳಸಿದರೆ ದೇವರ ಸಂತೋಷಗೊಳ್ಳುತ್ತಾನಂತೆ.

ಬಿಳಿ ಬಣ್ಣ ಶುಭ್ರತೆಯ ಸಂಕೇತ. ದೇವರ ಪೂಜೆ ಮಾಡಲು ಶುಭ್ರವಾದ ಮನಸ್ಸು ಮುಖ್ಯ. ಹಾಗಾಗಿ ದೇವರ ಪೂಜೆಯ ಬಿಳಿ ಬಣ್ಣದ ಹೂಗಳನ್ನು ಬಳಸಿದರೆ ಒಳ್ಳೆಯದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...