Kannada Duniya

ನಿಮ್ಮ ನೆಚ್ಚಿನ ಬಣ್ಣಗಳಿಗನುಗುಣವಾಗಿ ನಿಮ್ಮ ಸ್ವಭಾವವನ್ನು ತಿಳಿಯಿರಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಮ್ಮ ರಾಶಿಗನುಗುಣವಾಗಿ ನಮ್ಮ ಸ್ವಭಾವವನ್ನು ತಿಳಿದುಕೊಳ್ಳಬಹುದು. ಅದೇರೀತಿ ನಾವು ಮೆಚ್ಚುವಂತಹ ಬಣ್ಣಗಳ ಮೂಲಕ ಕೂಡ ನಮ್ಮ ಸ್ವಭಾವವನ್ನು ತಿಳಿದುಕೊಳ್ಳಬಹುದಂತೆ.

ಕೆಂಪು : ಈ ಬಣ್ಣವನ್ನು ಇಷ್ಟಪಡುವವರು ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಇವರು ತಮ್ಮದ ಭಾವನೆಗಳನ್ನು ಬಹಳ ಸುಲಭವಾಗಿ ವ್ಯಕ್ತಪಡಿಸುತ್ತಾರೆ. ಕೆಲಸದ ಸ್ಥಳಗಳಲ್ಲಿ ತಮ್ಮ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುತ್ತಾರೆ.

ನೀಲಿ : ಇವರು ಪ್ರಕೃತಿ ಜೊತೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ. ಇವರು ತಮ್ಮ ಸಂಬಂಧವನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಇವರು ಭಾವನೆಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಹಸಿರು : ಇವರು ತುಂಬಾ ಬುದ್ಧಿವಂತರಾಗಿರುತ್ತಾರೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹೃದಯಕ್ಕಿಂತ ಹೆಚ್ಚಾಗಿ ಮೆದುಳಿಗೆ ಕೆಲಸ ನೀಡುತ್ತಾರೆ.

ಹಳದಿ : ಇವರು ತಮ್ಮ ಸುತ್ತಮುತ್ತಲಿನ ಜನರ ಜೊತೆಗೆ ಸತೋಷದಿಂದ ಇರಲು ಬಯಸುತ್ತಾರೆ. ಇವರು ಜನರನ್ನು ಬಹಳ ಬೇಗನೆ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ. ಇವರು ತುಂಬಾ ಇಷ್ಟಪಟ್ಟು ಕೆಲಸ ಮಾಡುತ್ತಾರೆ.

ಕಪ್ಪು : ಇವರು ತಾವು ಅತ್ಯಂತ ಶಕ್ತಿಶಾಲಿಗಳೆಂದು ತೋರಿಸಲು ಪ್ರಯತ್ನಿಸುತ್ತಾರೆ. ಇವರು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಇವರು ಯಾವುದೇ ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ.

ಗುಲಾಬಿ : ಇವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರು ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸಮತೋಲನದಲ್ಲಿಡಲು ಇಷ್ಟಪಡುತ್ತಾರೆ. ಇವರು ಸ್ವತಂತ್ರರಾಗಿರಲು ಬಯಸುತ್ತಾರೆ.

ಬಿಳಿ : ಇವರು ಸುತ್ತಮುತ್ತಲಿನ ಜನರನ್ನು ಹೆಚ್ಚು ಪ್ರೀತಿಸುತ್ತಾರೆ. ಹಾಗೇ ಜನರಿಂದ ಶಾಂತಿಯನ್ನು ಬಯಸುತ್ತಾರೆ. ಇವರು ತುಂಬಾ ದಯೆಯುಳ್ಳವರು ಅಪರಿಚಿತರಿಗೆ ಸಹಾಯ ಮಾಡಲು ಬಯಸುತ್ತಾರೆ.

ನೇರಳೆ : ಇವರು ಇತರರ ಆಲೋಚನೆಗಳನನು ಕೇಳಲು ಬಯಸುತ್ತಾರೆ. ಇವರು ತುಂಬಾ ತಮಾಷೆ ಮಾಡುವಂತಹ ಸ್ವಭಾವದವರಾಗಿದ್ದಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...