Kannada Duniya

ಗಣೇಶ ಚತುರ್ಥಿಯಂದು ಈ ತಪ್ಪುಗಳನ್ನು ಮಾಡಬಾರದಂತೆ….!

ಗಣೇಶನನ್ನು ಮಂಗಳಕರವೆಂದು ಕರೆಯುತ್ತಾರೆ. ಗಣೇಶನ ಆರಾಧನೆ ಸಂತೋಷ, ಸಮೃದ್ಧಿಯನ್ನು ತರುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷವನ್ನು ಗಣೇಶನ ಪೂಜೆಗೆ ಸಮರ್ಪಿಸಲಾಗಿದೆ. ಈ ದಿನ ಗಣೇಶನನ್ನು ಬಹಳ ವಿಜೃಂಭಣೆಯಿಂದ ಪೂಜಿಸುತ್ತಾರೆ. ಆದರೆ ಗಣೇಶನ ಪೂಜೆ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ. ಇದರಿಂದ ಗಣೇಶ ಕೋಪಗೊಂಡು ಶಾಪ ನೀಡುತ್ತಾನೆ.

ಗಣೇಶನನ್ನು ಪೂಜಿಸುವಾಗ ಆತನ ಹಿಂಭಾಗ ಕಾಣಿಸದಂತೆ ಕೂರಿಸಿ. ಯಾಕೆಂದರೆ ಗಣೇಶನ ಹಿಂಭಾಗವನ್ನು ನೋಡಿದರೆ ಬಡತನ ಆವರಿಸುತ್ತದೆಯಂತೆ.

ಗಣೇಶನನ್ನು ಪೂಜಿಸಿದ ನಂತರ ಆತನನ್ನು ಏಕಾಂಗಿಯಾಗಿ ಬಿಡಬಾರದು. ಅವನ ಬಳಿ ಯಾರಾದರೂ ಕುಳಿತಿರಬೇಕು ಇದರಿಂದ ಗಣೇಶ ಸಂತೋಷಗೊಳ್ಳುತ್ತಾನೆ.

ಯಾವ ರಾಶಿಯವರು ಯಾವ ಬಣ್ಣದ ಕಾರನ್ನು ಖರೀದಿಸಿದರೆ ಅದೃಷ್ಟ ಎಂಬುದನ್ನು ತಿಳಿಯಿರಿ….!

ಗಣೇಶನ ಪೂಜೆಯಲ್ಲಿ ನೀಲಿ ಮತ್ತು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಇದರಿಂದ ಗಣೇಶ ಕೋಪಗೊಳ್ಳುತ್ತಾನೆ. ಹಾಗಾಗಿ ಕೆಂಪು ಮತ್ತು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ ಗಣೇಶನಿಗೆ ಪೂಜೆ ಸಲ್ಲಿಸಿ.

ಗಣೇಶ ಚತುರ್ಥಿಯ ದಿನ ಚಂದ್ರ ದರ್ಶನ ಮಾಡಬೇಡಿ. ಇದರಿಂದ ವ್ಯಕ್ತಿಯು ಕಳಂಕಕ್ಕೆ ಗುರಿಯಾಗುತ್ತಾನೆ. ಮತ್ತು ಗಣೇಶನ ಕೋಪಕ್ಕೆ ಗುರಿಯಾಗುತ್ತಾನೆ.

ಗಣೇಶ ಚತುರ್ಥಿಯಂದು ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಬೇಡಿ

ಗಣೇಶ ಚತುರ್ಥಿಯಂದು ಸಾತ್ವಿಕ ಆಹಾರ ಸೇವಿಸಿ. ಈ ಸಮಯದಲ್ಲಿ ಮಾಂಸ, ಮದ್ಯ ಸೇವನೆ ಮಾಡಬೇಡಿ. ಇದರಿಂದ ಗಣೇಶನ ಅನುಗ್ರಹ ಸಿಗುವುದಿಲ್ಲ.

 

Do not make these mistakes during Ganesh Chaturthi pooja


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...