Kannada Duniya

ಗಣೇಶ ಚತುರ್ಥಿಯಂದು ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಬೇಡಿ….!

ಪ್ರತಿ ವರ್ಷ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಹಾಗಾಗಿ ಈ ಬಾರಿ ಚೌತಿ ಆಗಸ್ಟ್ 31 ರಂದು ಬಂದಿದೆ. ಹಾಗಾಗಿ ಈ ದಿನ ವಿನಾಯಕನನ್ನು ಪೂಜಿಸುವಾಗ ಇವುಗಳನ್ನು ಅರ್ಪಿಸಬೇಡಿ.

ಅಂದು ಬಿಳಿ ಬಟ್ಟೆಗಳನ್ನ , ಬಿಳಿ ದಾರಗಳನ್ನು ಗಣೇಶನಿಗೆ ಅರ್ಪಿಸಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಹಳದಿ ಬಣ್ಣದ ವಸ್ತುಗಳನ್ನು ಮಾತ್ರ ಅರ್ಪಿಸಿ.

ಗಣೇಶನಿಗೆ ಅಕ್ಕಿಯನ್ನು ಅರ್ಪಿಸುವಾಗ ಮುರಿದ ಅಕ್ಕಿಯನ್ನು ಬಳಸಬಾರದು. ಮತ್ತು ಅಕ್ಕಿಯನ್ನು ಸ್ವಲ್ಪ ತೇವಗೊಳಿಸಿ ಅರ್ಪಿಸಿದರೆ ಒಳ್ಳೆಯದು.

ಗಣೇಶನಿಗೆ ಪೂಜೆ ಸಲ್ಲಿಸುವಾಗ ತುಳಸಿ ಎಲೆಗಳನ್ನು ಗಣೇಶನಿಗೆ ಅರ್ಪಿಸಬೇಡಿ. ಯಾಕೆಂದರೆ ತುಳಸಿ ಲಕ್ಷ್ಮಿ ಸ್ವರೂಪವಾದ್ದರಿಂದ ಅದನ್ನು ವಿಷ್ಣುವಿಗೆ ಮಾತ್ರ ಅರ್ಪಿಸಬೇಕು.

ಗಣೇಶನ ಪೂಜೆಗೆ ಬಿಳಿ ಬಣ್ಣದ ಹೂಗಳನ್ನು, ಕೆಟ್ಟದಾದ ಹೂಗಳನ್ನು ಅರ್ಪಿಸಬೇಡಿ.

ದೇವರಿಗೆ ಅರ್ಪಿಸಿದ ಹೂವಿನಿಂದ ಹೀಗೆ ಮಾಡಿದರೆ ದೇವರ ಅನುಗ್ರಹ ದೊರೆಯುತ್ತದೆಯಂತೆ

ಚಂದ್ರನ ಅಪಹಾಸ್ಯ ಮಾಡಿದ ಕಾರಣ ಬಿಳಿ ವಸ್ತುಗಳನ್ನು ಗಣೇಶ ತ್ಯಜಿಸಿದ್ದಾನೆ. ಹಾಗಾಗಿ ಬಿಳಿ ಬಣ್ಣ ದ ವಸ್ತುಗಳನ್ನು ಅರ್ಪಿಸಿದರೆ ಇದರಿಂದ ಕುಟುಂಬದಲ್ಲಿ ಬಡತನ ಕಾಡುತ್ತದೆ.

 

Do not offer these to Ganesha on Ganesh Chaturthi


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...