Kannada Duniya

ನಿಮ್ಮ ರಾಶಿಗನುಗುಣವಾಗಿ ಹೋಳಿ ಹಬ್ಬಕ್ಕೆ ಬಣ್ಣಗಳ ಆಟ ಆಡಿ

ಬಣ್ಣಗಳು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಯಾಕೆಂದರೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹಲವು ಬಣ್ಣಗಳಿವೆ. ಕೆಲವು ಮನಸ್ಸಿಗೆ ಖುಷಿ ನೀಡುತ್ತದೆ. ಹಾಗಾಗಿ ಮುಂಬರುವ ಹೋಳಿ ಹಬ್ಬವನ್ನು ನಿಮ್ಮ ನೆಚ್ಚಿನ ಬಣ್ಣಗಳ ಜೊತೆ ಆಡುವ ಬದಲು ನಿಮ್ಮ ರಾಶಿಗನುಗುಣವಾಗಿ ಬಳಸಿ ಅದೃಷ್ಟವನ್ನು ಹೆಚ್ಚಿಸಿಕೊಳ್ಳಿ.

ಮೇಷ ರಾಶಿ : ನೀವು ಕೆಂಪು, ಗುಲಾಬಿ ಮತ್ತು ಕಿತ್ತಳೆ ಬಣ್ಣಗಳ ನ್ನು ಬಳಸಿದರೆ ಒಳ್ಳೆಯದು. ಆದರೆ ಕಪ್ಪು, ನೀಲಿ, ಮತ್ತು ಹಸಿರು ಬಣ್ಣಗಳನ್ನು ತಪ್ಪಿಸಿ.

ವೃಷಭ : ನೀವು ಹೋಳಿ ಆಡಲು ಬಿಳಿ ಮತ್ತು ಕೆನೆ ಬಣ್ಣಗಳನ್ನು ಬಳಸಿ. ಹಸಿರು ಮತ್ತು ಕೆಂಪು ಬಣ್ಣಗಳನ್ನು ಬಳಸಬೇಡಿ.

ಮಿಥುನ : ನಿಮಗೆ ಹಸಿರು ಬಣ್ನ ಮಂಗಳಕರವಾಗಿದೆ. ಆದರೆ ಕೆಂಪು, ಕಿತ್ತಳೆ ಮತ್ತು ಹಳದಿ ಬಣ್ಣವನ್ನು ಬಳಸಬೇಡಿ.

ಕಟಕ : ನಿಮಗೆ ಬಿಳಿ ಮತ್ತು ಕೆನೆ ಬಣ್ಣಗಳು ಮಂಗಳಕರ. ಆದರೆ ಹಸಿರು, ಕಪ್ಪು ಮತ್ತು ನೀಲಿ ಬಣ್ಣಗಳನ್ನು ಬಳಸಬೇಡಿ.

ಸಿಂಹ ರಾಶಿ : ನಿಮಗೆ ಕೇಸರಿ, ಕೆಂಪು ಮತ್ತು ಗುಲಾಬಿ ಬಣ್ಣ ಮಂಗಳಕರ. ಆದರೆ ನೀಲಿ, ಕಪ್ಪು, ಹಸಿರು ಬಣ್ಣಗಳನ್ನು ಬಳಸಬೇಡಿ.

ಕನ್ಯಾ : ನೀವು ಗಾಢವಾದ ಹಸಿರು ಬಣ್ಣ ಒಳ್ಳೆಯದು. ಆದರೆ ಹಳದಿ, ಕೆಂಪು ಮತ್ತು ಕಿತ್ತಳೆ ಬಣ್ಣಗಳನ್ನು ತಪ್ಪಿಸಿ.

ತುಲಾ : ನಿಮಗೆ ಬಿಳಿ ಮತ್ತು ತಿಳಿ ನೀಲಿ ಬಣ್ಣ ಶುಭ. ಹಸಿರು ಮತ್ತು ಹಳದಿ ಬಣ್ಣದಿಂದ ದೂರವಿರಿ.

ವೃಶ್ಚಿಕ : ನೀವು ಹೋಳಿ ಆಡಲು ಕಿತ್ತಳೆ, ಕೆಂಪು ಮತ್ತು ಗುಲಾಬಿ ಬಣ್ಣಗಳನ್ನು ಬಳಸಿ. ಕಪ್ಪು, ನೀಲಿ ಮತ್ತು ಹಸಿರು ಬಣ್ಣಗಳನ್ನು ತಪ್ಪಿಸಿ.

ಧನು : ಹಳದಿ ಮತ್ತು ಚಿನ್ನದ ಬಣ್ಣಗಳನ್ನು ಹೋಳಿ ಹಬ್ಬಕ್ಕೆ ಬಳಸಿ. ಆದರೆ ಹಸಿರು, ಕಪ್ಪು ಮತ್ತು ನೀಲಿ ಬಣ್ಣಗಳನ್ನು ಬಳಸಬೇಡಿ.

ಮಕರ : ನೀವು ಕಂದು, ಬೂದು ಬಣ್ಣಗಳನ್ನು ಬಳಸಿ. ಆದರೆ ಕೆಂಪು, ಹಸಿರು ಕಿತ್ತಳೆ ಬಣ್ಣಗಳನ್ನು ಬಳಸಬೇಡಿ.

ಕುಂಭ: ನೀವು ಹೊಳಿ ಹಬ್ಬಕ್ಕೆ ಕಂದು, ಬೂದು ಬಣ್ಣಗಳನ್ನು ಬಳಸಿ. ಆದರೆ ಕೆಂಪು, ಹಸಿರು ಬಣ್ಣಗಳನ್ನು ತಪ್ಪಿಸಿ.

ಮೀನ: ಹಳದಿ ಮತ್ತು ಚಿನ್ನದ ಬಣ್ಣ ನಿಮಗೆ ಮಂಗಳಕರ. ಆದರೆ ಕಪ್ಪು, ನೀಲಿ ಮತ್ತು ಹಸಿರು ಬಣ್ಣಗಳನ್ನು ಬಳಸಬೇಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...