Kannada Duniya

ನಿಮ್ಮ ರಾಶಿಗನುಗುಣವಾಗಿ ಮಾಘ ಹುಣ್ಣಿಮೆಯಂದು ಈ ವಸ್ತುಗಳನ್ನು ದಾನ ಮಾಡಿ ಅದೃಷ್ಟ ಹೆಚ್ಚಿಸಿಕೊಳ್ಳಿ

ಹಿಂದೂಧರ್ಮದಲ್ಲಿ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಅದರಲ್ಲೂ ಮಾಘ ಮಾಸದ ಹುಣ್ಣಿಮೆ ಹೆಚ್ಚು ವಿಶೇಷವಾಗಿದೆ. ಈ ದಿನ ಕೆಲವು ವಿಶೇಷ ಪರಿಹಾರಗಳನ್ನು ಮಾಡುವುದರಿಂದ ಜೀವನದಲ್ಲಿ ಅದೃಷ್ಟ ಬದಲಾಗುತ್ತದೆಯಂತೆ. ಅದರಂತೆ ಈ ದಿನ ನಿಮ್ಮ ರಾಶಿಗನುಗುಣವಾಗಿ ದಾನವನ್ನು ಮಾಡಿರಿ.

ಮೇಷ ರಾಶಿ : ನೀವು ಈ ದಿನ ಗೋಧಿ, ಬೆಲ್ಲ , ಕಡಲೆ ಮತ್ತು ತಾಮ್ರದ ವಸ್ತುಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಕೊಡಿ.

ವೃಷಭ ರಾಶಿ : ನೀವು ಬಿಳಿ ಬಣ್ಣದ ಬಟ್ಟೆಯಲ್ಲಿ ಮೊಸರು, ಅನ್ನ, ತುಪ್ಪ ಮತ್ತು ಬೆಳ್ಳಿಯ ವಸ್ತುಗಳನ್ನು ದಾನವಾಗಿ ನೀಡಿ.

ಮಿಥುನ ರಾಶಿ:ಈ ರಾಶಿಯಲ್ಲಿ ಹುಟ್ಟಿದವರು ಹಸಿರು ಬಟ್ಟೆಯಲ್ಲಿ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಮತ್ತು ಪಚ್ಚೆ ರತ್ನದ ಕಲ್ಲುಗಳನ್ನು ದಾನವಾಗಿ ನೀಡಿ.

ಕಟಕ ರಾಶಿ : ನೀವು ಬಿಳಿ ಬಣ್ಣದ ಬಟ್ಟೆಯಲ್ಲಿ ಹಾಲು, ಅನ್ನ, ಮತ್ತು ಬೆಳ್ಳಿ, ಮುತ್ತುಗಳನ್ನು ದಾನವಾಗಿ ನೀಡಿ.

ಸಿಂಹ ರಾಶಿ : ನೀವು ಕೆಂಪು ಬಟ್ಟೆಯಲ್ಲಿ ಚಿನ್ನ, ಕೇಸರಿ ಅಥವಾ ಕೆಂಪು ಬಟ್ಟೆಗಳನ್ನು ದಾನವನ್ನು ನೀಡಿ.

ಕನ್ಯಾರಾಶಿ : ನೀವು ಹಸಿರು ತರಕಾರಿ, ಹಣ್ಣುಗಳು ಮತ್ತು ಪಚ್ಚೆ ರತ್ನದ ಕಲ್ಲುಗಳನ್ನು ದಾನ ಮಾಡಿ.

ತುಲಾ ರಾಶಿ : ಈ ಹುಣ್ಣಿಮೆಯ ದಿನ ತಾಮ್ರ, ಕಂಚು ಇತ್ಯಾದಿಗಳನ್ನಿ ನೀಲಿ ಬಣ್ಣದ ಬಟ್ಟೆಯಲ್ಲಿಟ್ಟು ದಾನ ಮಾಡಿ.

ವೃಶ್ಚಿಕ ರಾಶಿ : ನೀವು ಕೆಂಪು ಬಟ್ಟೆಯಲ್ಲಿ ಸುತ್ತಿದ ಬೇಳೆಕಾಳು, ಬೆಲ್ಲ ಮತ್ತು ಕೆಂಪು ಶ್ರೀಗಂಧವನ್ನು ದಾನ ಮಾಡಿ.

ಧನು ರಾಶಿ : ನೀವು ಹಳದಿ ಬಟ್ಟೆಯಲ್ಲಿ ಹಳದಿ ಹೂಗಳು, ಹಳದಿ ಸಿಹಿತಿಂಡಿಗಳನ್ನು ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ದಾನವಾಗಿ ನೀಡಿ.

ಮಕರ ಮತ್ತು ಕುಂಭ ರಾಶಿ : ನೀಲಿ ಬಣ್ಣದ ಬಟ್ಟೆಯಲ್ಲಿ ನೀಲಿ ಹೂಗಳು, ನೀಲಿ ಅಥವಾ ಕಪ್ಪು ಬಣ್ಣುದ ಬಟ್ಟೆಗಳನ್ನು ದಾನ ಮಾಡಿ.

ಮೀನ ರಾಶಿ : ನೀವು ಹಳದಿ ವಸ್ತು, ಪುಸ್ತಕ, ಜೇನುತುಪ್ಪ, ಕೆಂಪು ಬಣ್ಣದ ಬಟ್ಟೆಗಳನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ದಾನ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...