Kannada Duniya

ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಿದರೆ ಈ ಪರಿಹಾರಗಳನ್ನು ಮಾಡಿ….!

ಆಗಸ್ಟ್ 31ರಂದು ಪ್ರತಿಯೊಂದು ಮನೆಗೂ ಗಣೇಶ ಬರುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಎಲ್ಲರ ಮನೆಯಲ್ಲೂ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಹಾಗೇ ಆ ದಿನ ಚಂದ್ರನನ್ನು ನೋಡದಂತೆ ಎಚ್ಚರವಹಿಸಿ. ಇಲ್ಲವಾದರೆ ಗಣೇಶ ಕೋಪಗೊಂಡು ಶಾಪ ನೀಡುತ್ತಾನೆ. ಒಂದು ವೇಳೆ ಚಂದ್ರನನ್ನು ನೋಡಿದವರು ಗಣೇಶನ ಶಾಪದಿಂದ ಮುಕ್ತಿ ಪಡೆಯಲು ಈ ಪರಿಹಾರ ಮಾಡಿ.

ಚತುರ್ಥಿಯ ದಿನ ಗಣೇಶನಿಗೆ ಆನೆಯ ತಲೆ ಇರಿಸಿದ ಬಳಿಕ ಭೂಮಿಯನ್ನು ಸುತ್ತುವ ಸ್ಪರ್ಧೆಯಲ್ಲಿ ಗೆದ್ದ ಗಣಪತಿಯನ್ನು ಮೊದಲ ಆರಾಧಕನೆಂದು ಕರೆಯಲಾಗಿತ್ತು. ಹಾಗಾಗಿ ಎಲ್ಲಾ ದೇವ ದೇವತೆಗಳು ಮೊದಲ ಪೂಜೆ ಗಣೆಶನಿಗೆ ಸಲ್ಲಿಸಿದರೆ ಚಂದ್ರ ಮಾತ್ರ ಅದನ್ನು ಒಪ್ಪಿಕೊಳ್ಳಲಿಲ್ಲ. ಹಾಗಾಗಿ ಆತ ಗಣೇಶನ ಶಾಪಕ್ಕೆ ಗುರಿಯಾಗುತ್ತಾನೆ.

ಹಾಗಾಗಿ ಚತುರ್ಥಿಯ ದಿನ ಚಂದ್ರನನ್ನು ನೋಡಿದವರಿಗೆ ಗಣೇಶನ ಅನುಗ್ರಹ ದೊರೆಯುವುದಿಲ್ಲ.

ಗಣೇಶ ಚತುರ್ಥಿಯಂದು ಈ ತಪ್ಪುಗಳನ್ನು ಮಾಡಬಾರದಂತೆ

ಒಂದು ವೇಳೆ ಆಕಸ್ಮಿಕವಾಗಿ ಚಂದ್ರನನ್ನು ನೋಡಿದರೆ ಅದರಿಂದಾಗುವ ಪರಿಣಾಮವನ್ನು ತಪ್ಪಿಸಲು ಪೂರ್ಣ ಭಕ್ತಿಯಿಂದ, ‘ ಸಿಂಹ: ಪ್ರಸೇನ ಮನ್ವಧಿತ್ ಸಿಂಹೋ ಜಾಂಬವತಾ ಹತಃ’, ಸುಕುಮಾರ್ ಮಾರೋದೀಃ ತವ ಹ್ಯೇಷ ಸ್ಯಮಂತಕಃ.. ಮಂತ್ರವನ್ನು ಪಠಿಸಿ. ಇದರಿಂದ ಚಂದ್ರದೋಷದ ಕೆಟ್ಟ ಪರಿಣಾಮ ಬೀರುವುದಿಲ್ಲ. ಈ ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸಿದರೆ ವ್ಯಕ್ತಿ ಸಾಲ ಮುಕ್ತನಾಗುತ್ತಾನಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...