Kannada Duniya

ಧನು ರಾಶಿಯಲ್ಲಿ ಬುಧಾದಿತ್ಯ ಯೋಗ ರೂಪುಗೊಳ್ಳಲಿದ್ದು, ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಮತ್ತು ಬುಧ ಗ್ರಹಗಳು ಒಂದು ರಾಶಿಯಲ್ಲಿ ಸಂಯೋಗಗೊಂಡಾಗ ಬುಧಾದಿತ್ಯ ಯೋಗವು ರೂಪುಗೊಳ್ಳಲಿದೆ. ಅದರಂತೆ ಡಿಸೆಂಬರ್ 16ರಂದು ಧನುರಾಶಿಯಲ್ಲಿ ಸೂರ್ಯ ಮತ್ತು ಬುಧ ಸಂಯೋಗಗೊಳ್ಳಲಿದ್ದಾರೆ. ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ.

ಕುಂಭ ರಾಶಿ : ನೀವು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತೀರಿ. ನಿಮ್ಮ ಉಳಿತಾಯ ಹೆಚ್ಚಾಗಲಿದೆ. ನಿಮಗೆ ಹಣದ ಲಾಭವಾಗಲಿದೆ. ನೀವು ಈ ಸಮಯದಲ್ಲಿ ತಂದೆಯ ಬೆಂಬಲವನ್ನು ಪಡೆಯುತ್ತೀರಿ.

ವೃಶ್ಚಿಕ ರಾಶಿ : ನೀವು ಹಠಾತ್ ಹಣದ ಲಾಭವನ್ನು ಪಡೆಯುತ್ತೀರಿ. ನಿಮ್ಮ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗಲಿದೆ. ನೀವು ವ್ಯವಹಾರಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಹೋಗುವ ಸಂಭವವಿದೆ. ಜನರು ನಿಮ್ಮ ಕಡೆ ಆಕರ್ಷಿತರಾಗುತ್ತಾರೆ.

ಸಿಂಹ ರಾಶಿ : ನಿಮಗೆ ಮದುವೆ ಯೋಗ ಕೂಡಿ ಬರಲಿದೆ. ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನೀವು ಪ್ರತಿಯೊಂದು ಕಾರ್ಯ ಯಶಸ್ವಿಯಾಗಲಿದೆ. ನಿಮ್ಮ ಆಸೆಗಳು ಈಡೇರಲಿದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...