Kannada Duniya

ಡಿಸೆಂಬರ್ 31ರಂದು ಗುರುವಿನ ಚಲನೆ ಬದಲಾಗಲಿದೆ; ಈ ಒಂದು ರಾಶಿಯವರಿಗೆ ಉತ್ತಮ ಪ್ರಯೋಜನವಾಗಲಿದೆಯಂತೆ

ಗ್ರಹಗಳ ರಾಶಿ ಬದಲಾವಣೆಯ ಪರಿಣಾಮ ರಾಶಿಚಕ್ರದ ಮೇಲಾಗುತ್ತದೆ. ಅದರಂತೆ ಆಯಾ ರಾಶಿಯಲ್ಲಿ ಹುಟ್ಟಿದ ಜನರಿಗೆ ಶುಭ ಅಥವಾ ಅಶುಭ ಫಲ ಸಿಗಲಿದೆ. ಅದರಂತೆ ಡಿಸೆಂಬರ್ 31ರಂದು ಗುರುವು ಮೇಷರಾಶಿಗೆ ಪ್ರವೇಶಿಸಲಿದೆ. ಇದರಿಂದ ಮೇಷರಾಶಿಯವರಿಗೆ ಈ ಶುಭಫಲ ಸಿಗಲಿದೆಯಂತೆ.

ಗುರುವಿನ ಸಂಚಾರದಿಂದ ಮೇಷರಾಶಿಯವರಿಗೆ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಸಿಗಲಿದೆ. ನೀವು ತೆಗೆದುಕೊಳ್ಳುವಂತಹ ನಿರ್ಧಾರಗಳು ಭವಿಷ್ಯದಲ್ಲಿ ತುಂಬಾ ಪ್ರಯೋಜನಕಾರಿಯಾಗಲಿದೆಯಂತೆ. ಇದು ನಿಮಗೆ ಪ್ರಬುದ್ಧತೆಯನ್ನು ತರುತ್ತದೆ ಮತ್ತು ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಂತೆ.

ನಿಮ್ಮ ವೈವಾಹಿಕ ಜೀವನವು ಸುಖಕರವಾಗಿರಲಿದೆ. ಅವಿವಾಹಿತರ ವಿವಾಹದಲ್ಲಿ ಎದುರಾದ ಅಡೆತಡೆಗಳು ನಿವಾರಣೆಯಾಗಲಿದೆ. ತಂದೆಯೊಂದಿಗಿನ ನಿಮ್ಮ ಸಂಬಂಧ ಉತ್ತಮವಾಗಿರಲಿದೆ. ನಿಮ್ಮಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಾಗಲಿದೆ. ನಿಮ್ಮ ಅನೇಕ ಸಮಸ್ಯೆಗಳು ಕೊನೆಗೊಳ್ಳಲಿದೆ. ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...