Kannada Duniya

ಗಣೇಶ ಚತುರ್ಥಿಯ ದಿನ ಗಣೇಶನ ಪೂಜೆಗೆ ಈ 6 ವಸ್ತುಗಳಿಲ್ಲದಿದ್ದರೆ ಪೂಜೆ ಅಪೂರ್ಣವೆನಿಸುತ್ತದೆ….!

ಪ್ರತಿವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಗಣೇಶನಿಗೆ ಅದ್ದೂರಿಯಾಗಿ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತದೆ. ಹಾಗಾಗಿ ಈ ವರ್ಷ ಗಣೇಶ ಚತುರ್ಥಿ ಆಗಸ್ಟ್ 31ರಂದು ಬಂದಿದೆ. ಹಾಗಾಗಿ ಈ ದಿನ ಗಣೇಶನ ಪೂಜೆ ಮಾಡುವಾಗ ಈ 6 ವಸ್ತುಗಳಿರುವಂತೆ ನೋಡಿಕೊಳ್ಳಿ.

ಗರಿಕೆ : ಇದು ಗಣೇಶನಿಗೆ ತುಂಬಾ ಪ್ರಿಯವಾದುದು. ಹಾಗಾಗಿ ಚೌತಿಯ ದಿನ ಗಣೇಶನಿಗೆ ಗರಿಕೆಯನ್ನು ತಪ್ಪದೇ ಅರ್ಪಿಸಿ. ಇದರಿಂದ ಗಣೇಶ ನಿಮ್ಮ ಆಸೆಗಳನ್ನು ಈಡೇರಿಸುತ್ತಾನೆ.

ಮೋದಕ : ಸಿಹಿತಿಂಡಿಗಳಲ್ಲಿ ಮೋದಕ ಗಣೇಶನಿಗೆ ಬಹಳ ಪ್ರಿಯವಾದುದು. ಹಾಗಾಗಿ ಗಣೇಶ ಚತುರ್ಥಿಯ ದಿನ ಗಣೇಶನಿಗೆ ಮೋದಕವನ್ನು ತಪ್ಪದೇ ಅರ್ಪಿಸಿ.

ಸಿಂಧೂರ : ಗಣೇಶನ ಪೂಜೆಯ ವೇಳೆ ಗಣೇಶನಿಗೆ ಸಿಂಧೂರವನ್ನು ಅರ್ಪಿಸುವುದು ತುಂಬಾ ಮಂಗಳಕರ. ಹಾಗಾಗಿ ಗಣೇಶನ ಹಣೆಯ ಮೇಲೆ ತಿಲಕವನ್ನು ಹಚ್ಚಿ. ಇದರಿಂದ ನಿಮ್ಮ ಜೀವನದಲ್ಲಿ ಸಂತೋಷ ನೆಲೆಸುತ್ತದೆಯಂತೆ.

ಬಾಳೆಹಣ್ಣು : ಇದು ಗಣೇಶನಿಗೆ ಪ್ರಿಯವಾದುದು. ಹಾಗಾಗಿ ಗಣೇಶನಿಗೆ ಪೂಜೆಯ ವೇಳೆ ಇದನ್ನು ತಪ್ಪದೇ ಅರ್ಪಿಸಿ.
ಕೆಂಪು ಹೂ : ಗಣೇಶನ ಪೂಜೆಗೆ ಕೆಂಪು ಹೂಗಳನ್ನು ಅರ್ಪಿಸಿದರೆ ತುಂಬಾ ಒಳ್ಳೆಯದು.

ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಿದರೆ ಈ ಪರಿಹಾರಗಳನ್ನು ಮಾಡಿ….!

ಕಬ್ಬು : ಗಣೇಶನಿಗೆ ಕಬ್ಬನ್ನು ಅರ್ಪಿಸುವುದರಿಂದ ನಿಮ್ಮ ಜೀವನದಲ್ಲಿ ಸಿಹಿ ತುಂಬಿರುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...