Kannada Duniya

ಹಿಮ್ಮಡಿ ಕಾಲು ಬಿರುಕು ಬಿಟ್ಟಿದೆಯಾ….? ಒಮ್ಮೆ ಈ ಟಿಪ್ಸ್ ಅನುಸರಿಸಿ ನೋಡಿ!

ಪಾದಗಳಲ್ಲಿ ಬಿರುಕು ಕಾಣಿಸಿಕೊಳ್ಳುವ ಸಮಸ್ಯೆಗೆ ಮುಖ್ಯ ಕಾರಣ ಎಂದರೆ ಹೊರಗಿನ ವಾತಾವರಣ ಹಾಗೂ ಧೂಳು. ನಿಮ್ಮ ಪಾದಗಳಲ್ಲಿ ಬಿರುಕು
ಕಾಣಿಸಿಕೊಂಡಾಗ ಮೊದಲಿಗೆ ಈ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಿ.

ಸಣ್ಣ ಬಕೆಟ್ ನಲ್ಲಿ ನಿಮ್ಮ ಪಾದಗಳು ಮುಳುಗುವಷ್ಟು ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಚಿಟಿಕೆ ಉಪ್ಪು ಹಾಗೂ ನಿಂಬೆರಸ ಸೇರಿಸಿ. ಎರಡು ಕಾಲುಗಳನ್ನು 15 ನಿಮಿಷ ಇಳಿಬಿಡಿ. ಬಳಿಕ ಸ್ವಚ್ಛವಾಗಿ ಒರೆಸಿ ಸಾಕ್ಸ್ ಧರಿಸಿ. ನಿತ್ಯ ಹೀಗೆ ಮಾಡುತ್ತಾ ಬಂದರೆ ಬಿರುಕು ಬಿಟ್ಟ ಪಾದಗಳ ಸಮಸ್ಯೆ ನಿವಾರಣೆಯಾಗುತ್ತದೆ.

ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಕಿವುಚಿ ಪೇಸ್ಟ್ ತಯಾರಿಸಿ. ಅದಕ್ಕೆ ಜೇನುತುಪ್ಪ ಬೆರೆಸಿ. ಈ ಮಿಶ್ರಣವನ್ನು ಹಿಮ್ಮಡಿಗಳ ಮೇಲೆ ಹಚ್ಚಿ ನಯವಾಗಿ ಮಸಾಜ್
ಮಾಡಿ. ಅರ್ಧ ಗಂಟೆ ಬಳಿಕ ಕಾಲುಗಳನ್ನು ತೊಳೆಯಿರಿ.

ಕಲಬೆರಕೆ ರಹಿತ ಎಳ್ಳೆಣ್ಣೆಯ ಮಸಾಜ್ ನಿಂದಲೂ ಈ ನೋವನ್ನು ಅನ್ನು ಕಡಿಮೆ ಮಾಡಬಹುದು. ಪ್ರತಿದಿನ ರಾತ್ರಿ ಮಲಗುವ ಮುನ್ನ ಬಿರುಕು ಬಿಟ್ಟ ಪಾದಗಳಿಗೆ
ಎಳ್ಳೆಣ್ಣೆ ಹಚ್ಚಿ ಕೈ ಬೆರಳಿನಿಂದ ಚೆನ್ನಾಗಿ ಮಸಾಜ್ ಮಾಡುತ್ತಾ ಬನ್ನಿ. ಕ್ರಮೇಣ ನಿಮ್ಮ ಸಮಸ್ಯೆ ದೂರವಾಗುತ್ತದೆ.

ಶುದ್ಧ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಅಥವಾ ಆಲಿವ್ ಎಣ್ಣೆಯನ್ನು ಬಳಸುವುದರಿಂದಲೂ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...