Kannada Duniya

ಈ ರಾಶಿಯವರಿಗೆ ಹವಳದ ಕಲ್ಲು ಅದೃಷ್ಟವನ್ನು ತರುತ್ತದೆಯಂತೆ….!

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಸರಿಯಾಗಿರದಿದ್ದರೆ ಅದು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ. ಹಾಗಾಗಿ ಗ್ರಹಗಳ ಕೆಟ್ಟ ಪರಿಣಾಮದಿಂದ ತಪ್ಪಿಸಿಕೊಳ್ಳಲು ರತ್ನಗಳನ್ನು ಧರಿಸುವಂತೆ ಪಂಡಿತರು ಸಲಹೆ ನೀಡುತ್ತಾರೆ.

ಪಂಡಿತರು ತಿಳಿಸಿದ ಪ್ರಕಾರ, ಕೆಂಪು ಹವಳ ಧರಿಸುವುದರಿಂದ ನಿಮ್ಮ ಧೈರ್ಯ ಹೆಚ್ಚಾಗುತ್ತದೆಯಂತೆ. ಹಾಗಾಗಿ ಕನಸಿನಲ್ಲಿ ತುಂಬಾ ಹೆದರುವವರು ಕೆಂಪು ಹವಳವನ್ನು ಧರಿಸಿಕೊಳ್ಳಿ. ಇದು ನಿಮ್ಮ ಜೀವನದಲ್ಲಿ ಏಳಿಗೆ ಹೊಂದಲು ಸಹಾಯ ಮಾಡುತ್ತದೆ.

ನಿಮ್ಮ ಸಂಗಾತಿ ಮೆಸೇಜ್ ಡಿಲಿಟ್ ಮಾಡುತ್ತಿರುವುದು ಯಾಕಿರಬಹುದು….?

ಆದರೆ ಈ ಹವಳವನ್ನು ಮೇಷ, ವೃಶ್ಚಿಕ, ಸಿಂಹ, ಧನು, ಮೀನ ರಾಶಿಯವರು ಧರಿಸಿದರೆ ಒಳ್ಳೆಯದಂತೆ. ಕೆಂಪು ಹವಳ ಮಂಗಳ ಗ್ರಹಕ್ಕೆ ಸಂಬಂಧಿಸಿದ್ದು, ಹಾಗಾಗಿ ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿ ಮಂಗಳವಾಗಿರುವ ಕಾರಣ ಈ ರಾಶಿಯವರಿಗೆ ಒಳ್ಳೆಯದು. ಹಾಗೇ ಜಾತಕದಲ್ಲಿ ಮಂಗಳನು ಉತ್ತಮ ಸ್ಥಾನದಲ್ಲಿದ್ದರೆ ಹವಳವನ್ನು ಧರಿಸಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...