Kannada Duniya

ನೀವು ಯಾವುದೇ ಕ್ರೀಡೆಯಲ್ಲಿ ಚಾಂಪಿಯನ್ ಆಗಲು ಬಯಸಿದರೆ ಈ ಗ್ರಹವನ್ನು ಬಲಪಡಿಸಿ

ಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಇರುತ್ತದೆ. ಹಾಗೇ ಕೆಲವರಿಗೆ ಕ್ರೀಡೆಗಳ ಮೇಲೆ ಹೆಚ್ಚಿ ಆಸಕ್ತಿ ಇರುತ್ತದೆ. ಅವರು ಅದರಲ್ಲೇ ಏನನಾದರೂ ಸಾಧಿಸಬೇಕೆಂದು ಬಯಸುತ್ತಾರೆ. ಹಾಗಾಗಿ ನೀವು ಕ್ರೀಡೆಯಲ್ಲಿ ಯಾವುದೇ ಸಾಧನೆ ಮಾಡಲು ನಿಮ್ಮ ಜಾತಕದಲ್ಲಿ ಈ ಗ್ರಹ ಬಲವಾಗಿರಬೇಕಂತೆ.

ನೀವು ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಲು ಜಾತಕದಲ್ಲಿ ಲಗ್ನ ಮತ್ತು ಲಗ್ನದ ಅಧಿಪತಿ ಶುಭ ಸ್ಥಾನದಲ್ಲಿರಬೇಕು.

ಆಟಗಾರನ ಜಾತಕದಲ್ಲಿ ಮೂರನೇ ಮನೆ ಕ್ರೀಡಾ ಜಗತ್ತಿಗೆ ಸಂಬಂದಿಸಿದ ಎನ್ನಲಾಗಿದೆ. ಈ ಮನೆ ಶೌರ್ಯ ಮತ್ತು ಧೈರ್ಯಕ್ಕೆ ಸಂಬಂಧಿಸಿದೆ. ಹಾಗಾಗಿ ಮೂರನೇ ಮನೆಯ ಅಧಿಪತಿ ಬಲವಾದ ಸ್ಥಾನದಲ್ಲಿರಬೇಕು. ಹಾಗೇ ಜಾತಕದಲ್ಲಿ 5 ನೇ ಮನೆ ಬುದ್ಧಿವಂತಿಕೆ ಮತ್ತು ಜ್ಞಾನಕ್ಕೆ ಸಂಬಂಧಿಸಿದೆ. ಹಾಗಾಗಿ ನೀವು ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಕಾಣಲು 5ನೇ ಮನೆಯ ಅಧಿಪತಿ ಬಲವಾಗಿರಬೇಕು. ಅಲ್ಲದೇ 9ನೇ ಮತ್ತು 10ನೇ ಮನೆ ಕೂಡ ಕ್ರೀಡೆಗೆ ಸಂಬಂಧಿಸಿದಾಗಿದೆ.

ಹಾಗೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಂಗಳ ಗ್ರಹವು ಕ್ರೀಡೆಗೆ ಸಂಬಂಧಿಸಿದ ಗ್ರಹವೆಂದು ಕರೆಯಲಾಗುತ್ತದೆ. ಮಂಗಳ ಶಕ್ತಿ ಮತ್ತು ಶೌರ್ಯದ ಸಂಕೇತ. ಹಾಗಾಗಿ ವ್ಯಕ್ತಿ ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಜಾತಕದಲ್ಲಿ ಮಂಗಳಗ್ರಹ ಬಲವಾದ ಸ್ಥಾನದಲ್ಲಿರಬೇಕು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...