Kannada Duniya

ಅಭ್ಯಾಸಗಳು ಹಠಾತ್ ಹೃದಯಾಘಾತವನ್ನು ಹೆಚ್ಚಿಸುತ್ತದೆ…..!

ಹೃದಯವು ಆರೋಗ್ಯವಾಗಿರುವುದು ಬಹಳ ಮುಖ್ಯ. ಆದರೆ ನಮ್ಮ ಜೀವನಶೈಲಿಗಳು ನಮ್ಮ ಹೃದಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ ಧೂಮಪಾನ , ಕೊಬ್ಬಿನ ಆಹಾರಗಳ ಸೇವನೆ, ಮದ್ಯದ ಚಟಗಳು ನಮ್ಮ ಹೃದಯವನ್ನು ಹಾಳುಮಾಡುತ್ತವೆ. ಅಲ್ಲದೇ ನಮ್ಮ ಕೆಲವು ವಿಚಾರಗಳು ಹಠಾತ್ ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಶೀತ, ಜ್ವರ ಬಂದ ಒಂದು ವಾರದ ನಂತರ ಜನರು ಹೃದಯಾಘಾತಕ್ಕೆ ಒಳಗಾಗುವ ಸಂಭವವಿದೆ. ಯಾಕೆಂದರೆ ಸೋಂಕಿನ ವಿರುದ್ಧ ಹೋರಾಡುವಾಗ ರಕ್ತ ಜಿಗುಟಾಗುತ್ತದೆ. ರಕ್ತ ಹೆಪ್ಪುಗಟ್ಟಲು ಪ್ರಾರಂಭವಾಗುತ್ತದೆ. ಇದು ಹೃದಯಾಘಾತವನ್ನು ಹೆಚ್ಚಿಸಬಹುದು.

ಅತಿಯಾದ ಕೆಫೀನ್ ಸೇವನೆಯು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ದಿನಕ್ಕೆ 2 ಕಪ್ ಗಳಿಂತ ಹೆಚ್ಚು ಕಾಫಿ, ಟೀ ಸೇವಿಸಬೇಡಿ.

ಏಕಕಾಲದಲ್ಲಿ ಅತಿಯಾಗಿ ಆಹಾರ ಸೇವಿಸುವುದರಿಂದ ಒತ್ತಡದ ಹಾರ್ಮೋನ್ ಬಿಡುಗಡೆಗೆ ಕಾರಣವಾಗುತ್ತದೆ. ಇದು ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಹೆಚ್ಚಿಸುವ ಮೂಲಕ ಹೃದಯಾಘಾತವನ್ನು ಪ್ರಚೋದಿಸುತ್ತದೆ.

ಸಂಬಂಧವನ್ನು ಹೊಂದುವ ಮುನ್ನ ನಿಮ್ಮನ್ನು ನೀವು ಈ ರೀತಿಯಾಗಿ ‘ಪ್ರಶ್ನಿಸಿ’

ಕೋಪ, ದುಃಖ, ಒತ್ತಡದಂತಹ ಭಾವನೆಗಳು ಕೂಡ ಹೃದಯದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಅತಿಯಾದ ಸಂತೋಷ ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...