Kannada Duniya

ಸೀತಾಫಲದ ಎಲೆಯ ಚಹಾ ಸೇವಿಸಿದರೆ ಎಷ್ಟೆಲ್ಲಾ ಲಾಭವಿದೆ ನೋಡಿ!

ಸೀತಾಫಲ ಹಣ್ಣು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಹಲವು ಲಾಭಗಳನ್ನು ನೀಡುವ ಸೀತಾಫಲದಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ ಹಾಗೂ ಫೈಬರ್ ಅಂಶಗಳಿದ್ದು ಹಲವು ಔಷಧೀಯ ಗುಣಗಳು ಇದರಲ್ಲಿದೆ.

ಸೀತಾಫಲದ ಎಲೆಗಳನ್ನು ಕುದಿಸಿ ಚಹಾ ತಯಾರಿಸಿ ಕುಡಿಯುವುದರಿಂದ ಹೃದಯಘಾತದ ಅಪಾಯವನ್ನು ಕಡಿಮೆ ಮಾಡಬಹುದು ಎನ್ನಲಾಗಿದೆ.

ಸೀತಾಫಲದ ಎಲೆಗಳನ್ನು ರುಬ್ಬಿ ಪೇಸ್ಟ್ ತಯಾರಿಸಿ ತ್ವಚೆಗೆ ಹಚ್ಚುವುದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಕಾಯಿಲೆಗಳು ದೂರವಾಗುತ್ತವೆ.

ಮಧುಮೇಹ ರೋಗಿಗಳಿಗೆ ಸೀತಾಫಲ ಹೇಳಿ ಮಾಡಿಸಿದ ಹಣ್ಣಲ್ಲ. ಆದರೆ ಇದರ ಎಲೆಗಳಿಂದ ಹಲವು ಲಾಭಗಳಿವೆ. ಇದರ ಎಲೆಗಳ ಕಷಾಯ ತಯಾರಿಸಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣ ಸಾಧ್ಯವಾಗುತ್ತದೆ.

ಸೀತಾಫಲದ ಎಲೆಗಳಲ್ಲಿ ಜೀವ ಸತ್ವಗಳು, ಪೋಷಕಾಂಶಗಳು ಹಾಗೂ ಫೈಬರ್ ಅಂಶ ಸಾಕಷ್ಟಿರುವುದರಿಂದ ಹೃದಯವನ್ನು ಆರೋಗ್ಯವಾಗಿಡುತ್ತದೆ. ಹಾಗಿದ್ದರೆ ತಡ ಯಾಕೆ ಇಂದೇ ಸೀತಾಫಲದ ಎಲೆಗಳನ್ನು ಕುದಿಸಿ ಚಹಾ ತಯಾರಿಸಿ ಕುಡಿಯಿರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...