Kannada Duniya

ಚಿಪ್ಸ್ ಬದಲು ಪಿಸ್ತಾ ತಿನ್ನಿ, ಬದಲಾವಣೆ ಗಮನಿಸಿ

ಏನನ್ನಾದರೂ ತಿನ್ನಬೇಕು ಎನಿಸಿದಾಗ ಚಿಪ್ಸ್ ಇಲ್ಲವೇ ಕುರುಕುರು ತಿಂಡಿಯ ಪ್ಯಾಕೆಟ್  ಓಪನ್ ಮಾಡುವ ಬದಲು ಪಿಸ್ತಾ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ಹಲವು ಲಾಭಗಳನ್ನು ಪಡೆದುಕೊಳ್ಳಬಹುದು.

ಪಿಸ್ತಾ ಸೇವನೆ ಮಾಡುವುದರಿಂದ ರಕ್ತನಾಳಗಳ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಪಿಸ್ತಾದಲ್ಲಿ ಕ್ಯಾಲೊರಿಗಳು ಸಾಕಷ್ಟಿದ್ದರೂ ಅವು ಉತ್ತಮ ಪ್ರಮಾಣದ ಫೈಬರ್ ಮತ್ತು ಪ್ರೊಟೀನ್ ಅನ್ನು ಒಳಗೊಂಡಿದೆ. ಇದು ತೂಕ ನಿಯಂತ್ರಣಕ್ಕೆ ನೆರವಾಗುತ್ತದೆ. ಹಾಗೂ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.

ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಮಧುಮೇಹಿಗಳಿಗೆ ಪಿಸ್ತಾ ಹೇಳಿ ಮಾಡಿಸಿದ ತಿನಿಸು. ನಿಯಮಿತವಾಗಿ ಪಿಸ್ತಾ ತಿನ್ನುತ್ತಾ ಬಂದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ಇದು ಜೀರ್ಣಕ್ರಿಯೆಯನ್ನು ನಿಯಂತ್ರಿಸುವ ಜೊತೆಗೆ ಮಲಬದ್ಧತೆಯಂಥ ಸಮಸ್ಯೆಯಿಂದ ನಿಮ್ಮನ್ನು ಕಾಪಾಡುತ್ತದೆ. ಫಾಸ್ಪರಸ್ ಮತ್ತು ಮೆಗ್ನಿಸಿಯಂ ಅಂಶ ಸಾಕಷ್ಟಿರುವುದರಿಂದ ಮೂಳೆಗಳಿಗೆ ಅದ್ಭುತ ಶಕ್ತಿ ನೀಡುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ಅಪಾಯದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...