Kannada Duniya

ನಿಮ್ಮ ನಾಯಿ ಆರೋಗ್ಯವಾಗಿರಲು ಈ ಪೋಷಕಾಂಶಗಳನ್ನು ತಪ್ಪದೇ ನೀಡಿ

ಕೆಲವರು ಮನೆಯಲ್ಲಿ ನಾಯಿಯನ್ನು ಸಾಕುತ್ತಾರೆ. ಅದನ್ನು ತಮ್ಮ ಮಕ್ಕಳಂತೆ ಪೋಷಿಸುತ್ತಾರೆ. ಅದಕ್ಕಾಗಿ ವಿವಿಧ ರೀತಿಯ ಆಹಾರಗಳನ್ನು ನೀಡುತ್ತಾರೆ. ಆದರೆ ನಿಮ್ಮ ನಾಯಿ ಆರೋಗ್ಯವಾಗಿರಲು ಈ ಪೋಷಕಾಂಶಗಳನ್ನು ತಪ್ಪದೇ ನೀಡಿ.

ನಿಮ್ಮ ನಾಯಿಗೆ ವಿಟಮಿನ್ ಎ, ಡಿ, ಇ, ಕೆ ಪೊಷಕಾಂಶವನ್ನು ನೀಡಿ. ಇವು ಕಣ್ಣು, ಮೂಳೆಗಳು, ಚರ್ಮ, ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೇ ಇವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆಯಂತೆ.

ಬಿ ಜೀವಸತ್ವಗಳು : ಇವು ನಾಯಿಗಳಿಗೆ ಶಕ್ತಿಯನ್ನು ನೀಡುತ್ತದೆ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ.

ಹಾಗೇ ನಾಯಿಗಳ ಮೂಳೆಗಳು ಗಟ್ಟಿಗೊಳ್ಳಲು ಕ್ಯಾಲ್ಸಿಯಂ, ಸ್ನಾಯುಗಳ ರಚನೆ ಮತ್ತು ನರಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಮೆಗ್ನೀಶಿಯಂ ಮತ್ತು ಕೆಂಪು ರಕ್ತ ಕಣಗಳ ಸಂಖ್ಯೆಯ ಹೆಚ್ಚಾಗಲು ಕಬ್ಬಿಣಾಂಶ ಸಮೃದ್ಧವಾಗಿರುವ ಆಹಾರ ನೀಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...