Kannada Duniya

ಸಾಕು ಪ್ರಾಣಿಗಳು ನಿಮ್ಮ ಚರ್ಮವನ್ನು ನೆಕ್ಕುವುದು ಒಳ್ಳೆಯದೇ?

ಕೆಲವರು ಮನೆಯಲ್ಲಿ ನಾಯಿ, ಬೆಕ್ಕು ಮುಂತಾದ ಸಾಕು ಪ್ರಾಣಿಗಳನ್ನು ಸಾಕುತ್ತಾರೆ. ಅಲ್ಲದೇ ಅವುಗಳನ್ನು ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಾರೆ. ಹಾಗಾಗಿ ಅವುಗಳಿಗೆ ತಮ್ಮ ಮುಖ, ಕಾಲು, ಕೈಗಳನ್ನು ನೆಕ್ಕಲು ಬಿಡುತ್ತಾರೆ. ಆದರೆ ಸಾಕು ಪ್ರಾಣಿಗಳು ನಿಮ್ಮ ಚರ್ಮವನ್ನು ನೆಕ್ಕುವುದು ಒಳ್ಳೆಯದೇ? ಎಂಬುದನ್ನು ತಿಳಿಯಿರಿ.

ಸಾಕು ಪ್ರಾಣಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಾಗ ಮುಖವನ್ನು ನೆಕ್ಕುತ್ತವೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾಕೆಂದರೆ ಇದರಿಂದ ನಿಮಗೆ ಸೋಂಕಿನ ಅಪಾಯ ಕಾಡಬಹುದು. ಯಾಕೆಂದರೆ ನಾಯಿಗಳ ಲಾಲಾರಸದಲ್ಲಿ ಅನೇಕ ರೀತಿಯ ಬ್ಯಾಕ್ಟೀರಿಯಾಗಳಿರುತ್ತದೆ. ಇದು ದೇಹವನ್ನು ಪ್ರವೇಶಿಸಿ ಸೋಂಕಿಗೆ ಕಾರಣವಾಗಬಹುದು.

ಅಲ್ಲದೇ ಕೆಲವೊಮ್ಮೆ ಅವು ಅಪ್ಪಿತಪ್ಪಿ ಕಚ್ಚಿದರೆ ನಿಮ್ಮ ಜೀವಕ್ಕೆ ಆಪತ್ತಾಗಬಹುದು. ಅಲ್ಲದೇ ಪ್ರಾಣಿಗಳು ನೆಕ್ಕುವುದರಿಂದ ಚರ್ಮದಲ್ಲಿ ಗಾಯಗಳಿದ್ದರೆ ಅದಕ್ಕೆ ಸೋಂಕು ತಗುಲಿ ಗಾಯ ವಾಸಿಯಾಗದೇ ಇರಬಹುದು. ಹಾಗೇ ನಿಮ್ಮ ಚರ್ಮದಲ್ಲಿರುವ ಸೋಂಕು ಪ್ರಾಣಿಗಳಿಗೆ ತಗುಲಿ ಅವುಗಳಿಗೆ ಹಾನಿಯಾಗುವ ಅಪಾಯವಿದೆ ಎನ್ನಲಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...