Kannada Duniya

ಈ ಪ್ರಾಣಿಗಳಿಂದ ಗಂಭೀರವಾದ ಕಾಯಿಲೆ ಹರಡುತ್ತದೆಯಂತೆ

ಪ್ರಪಂಚದಾದ್ಯಂತ ಅನೇಕ ರೋಗಗಳು ಹರಡುತ್ತಿದೆ. ಇದಕ್ಕೆ ಅನೇಕ ಜನರು ಬಲಿಪಶುಗಳಾಗಿದ್ದಾರೆ. ಆದರೆ ಅಪಾಯಕಾರಿ, ಮಾರಣಾಂತಿಕ ಕಾಯಿಲೆಗಳು ಕೆಲವೊಮ್ಮೆ ನಮ್ಮ ಮನೆಯಲ್ಲಿರುವ ಪ್ರಾಣಿಗಳಿಂದಲೂ ಹರಡುತ್ತದೆಯಂತೆ. ಹಾಗಾಗಿ ಅವುಗಳ ಬಗ್ಗೆ ಎಚ್ಚರದಿಂದಿರಿ.

ಬಾವಲಿ : ಇವು ಅನೇಕ ಗಂಭೀರವಾದ ಕಾಯಿಲೆಗಳನ್ನು ಹರಡುತ್ತವೆ. ಇವು ಎಬೋಲಾ ವೈರಸ್, ಮಾರ್ಬರ್ಗ್ ಮತ್ತು ನಿಪಾ ವೈರಸ್ ಅನ್ನು ಹೊಂದಿದೆ. ಈ ವೈರಸ್ ಗಳು ಮಾರಣಾಂತಿಕವಾಗಿವೆಯಂತೆ.

ಇಲಿಗಳು : ಇಲಿಗಳು ಮನೆಯಲ್ಲಿರುತ್ತವೆ. ಆದರೆ ಇಲಿಗಳಿಂದ ಪ್ಲೇಗ್ ಕಾಯಿಲೆ ಹರಡುತ್ತದೆ. ಇದು ಒಂದು ಗಂಭೀರವಾದ ಕಾಯಿಲೆಯಾಗಿದ್ದು, ಇದರಿಂದ ಅನೇಕ ಜನರು ಜೀವ ಕಳೆದುಕೊಂಡಿದ್ದಾರೆ.

ಸೊಳ್ಳೆ : ಇವು ಮನೆಯ ಸುತ್ತಮುತ್ತಲೂ ಕಂಡುಬರುತ್ತದೆ. ಕೊಳಕು ನೀರು ನಿಲ್ಲುವ ಕಡೆ ಇವು ಹುಟ್ಟುತ್ತವೆ. ಸೊಳ್ಳೆಗಳಿಂದ ಕಚ್ಚಿಸಿಕೊಂಡರೆ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ಮುಂತಾದ ಮಾರಣಾಂತಿಕ ಕಾಯಿಲೆಗಳು ಬರುತ್ತದೆಯಂತೆ.

ನಾಯಿ : ನಾಯಿಯನ್ನು ಮನೆಯಲ್ಲಿ ಸಾಕುತ್ತಾರೆ. ಆದರೆ ನಾಯಿಗಳ ಜೊಲ್ಲಿನಲ್ಲಿ ಬ್ಯಾಕ್ಟೀರಿಯಾಗಳಿರುತ್ತದೆ. ಅಲ್ಲದೇ ರೇಬಿಸ್ ಸೋಂಕು ತಗುಲಿದ ನಾಯಿಯ ಜೊಲ್ಲು ನಿಮ್ಮ ದೇಹದಲ್ಲಿರುವ ಗಾಯಕ್ಕೆ ತಗುಲಿದರೆ ನಿಮ್ಮ ಜೀವಕ್ಕೆ ಆಪತ್ತು ಬರಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...