Kannada Duniya

ಚೈತ್ರ ಮಾಸದಲ್ಲಿ ಲಕ್ಷ್ಮಿದೇವಿಯ ಕೃಪೆ ಪಡೆಯಲು ಈ ಪರಿಹಾರಗಳನ್ನು ಮಾಡಿ

ಚೈತ್ರ ಮಾಸ ಮಾಸಗಳಲ್ಲಿ ಮೊದಲ ಮಾಸ. ಹಿಂದೂಧರ್ಮದಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಪುರಾಣಗಳ ಪ್ರಕಾರ ಈ ಮಾಸದಲ್ಲಿ ಬ್ರಹ್ಮ ದೇವ ಬ್ರಹ್ಮಾಂಡವನ್ನು ಸೃಷ್ಟಿಸಿದನು ಎನ್ನಲಾಗುತ್ತದೆ. . ಹಾಗೇ ಈ ಮಾಸದಲ್ಲಿ ವಿಷ್ಣುವಿನ ಮತ್ಸ್ಯ ರೂಪವನ್ನು ಪೂಜಿಸಲಾಗುತ್ತದೆ. ಹಾಗಾಗಿ ಈ ಮಾಸದಲ್ಲಿ ಲಕ್ಷ್ಮಿದೇವಿಯ ಅನುಗ್ರಹ ಪಡೆಯಲು ಈ ಕೆಲಸ ಮಾಡಿ.

ಚೈತ್ರ ಮಾಸದಲ್ಲಿ ಅರಳೀಮರವನ್ನು ಪೂಜಿಸಿ. ಹಾಗೇ ಮರಕ್ಕೆ 7 ಪ್ರದಕ್ಷಿಣೆ ಹಾಕಿ ಕೆಂಪು ಬಟ್ಟೆಯನ್ನು ಅರ್ಪಿಸಿದರೆ ಜೀವನದಲ್ಲಿ ಸುಖ, ಶಾಂತಿ ನೆಲೆಸುತ್ತದೆಯಂತೆ.

ಈ ಮಾಸದಲ್ಲಿ ಪ್ರತಿ ಗುರುವಾರ ಬಾಳೆಮರವನ್ನು ಪೂಜಿಸಿ. ಈ ದಿನ ವಿಷ್ಣುವಿನ ಸಹಸ್ರನಾಮವನ್ನು ಪಠಿಸಿ. ಇದರಿಂದ ಗುರುವಿನ ಅನುಗ್ರಹದಿಂದ ಸಮಾಜದಲ್ಲಿ ಗೌರವ ಲಭಿಸುತ್ತದೆಯಂತೆ.

ಈ ಮಾಸದಲ್ಲಿ ಪ್ರತಿದಿನ , ಇಲ್ಲವಾದರೆ ಭಾನುವಾರದಂದು ಸೂರ್ಯದೇವನಿಗೆ ಅರ್ಘ್ಯವನ್ನು ಅರ್ಪಿಸಿ. ಇದರಿಂದ ನಿಮ್ಮ ಕಾಯಿಲೆಗಳು ನಿವಾರಣೆಯಾಗುತ್ತದೆ.

ಈ ಮಾಸದಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ನೀಡಿ. ಇದರಿಂದ ಲಕ್ಷ್ಮಿದೇವಿ ಸಂತೋಷಗೊಳ್ಳುತ್ತಾಳಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...